HomeKarnatakaನಾಪತ್ತೆಯಾಗಿದ್ದ ಇಬ್ಬರು ಯುವತಿಯರು ಮಲ್ಪೆ ಬಳಿ ಸಮುದ್ರ ಪಾಲು; ಓರ್ವ ಯುವತಿ ರಕ್ಷಣೆ

ನಾಪತ್ತೆಯಾಗಿದ್ದ ಇಬ್ಬರು ಯುವತಿಯರು ಮಲ್ಪೆ ಬಳಿ ಸಮುದ್ರ ಪಾಲು; ಓರ್ವ ಯುವತಿ ರಕ್ಷಣೆ

ಮಂಗಳೂರು: ಮಡಿಕೇರಿಯಿಂದ ನಾಪತ್ತೆಯಾಗಿದ್ದ ಇಬ್ಬರು ಯುವತಿಯರು ಉಡುಪಿ ಜಿಲ್ಲೆಯ ಮಲ್ಪೆ ಬಳಿ ನೀರು ಪಾಲಾಗಿದ್ದು, ಓರ್ವ ಯುವತಿಯನ್ನು ರಕ್ಷಿಸಲಾಗಿದೆ.

ಕೊಡಗು ಜಿಲ್ಲೆಯ ಮಡಿಕೇರಿಯಿಂದ ಇಬ್ಬರು ಯುವತಿಯರು ನಾಪತ್ತೆಯಾಗಿದ್ದರು, ಇದೀಗ ಮಲ್ಪೆ ಕಡಲ ತೀರದಲ್ಲಿ ಇಬ್ಬರೂ ನೀರುಪಾಲಾಗಿದ್ದು, ಸಮುದ್ರದ ಅಲೆಗಳ ಅಬ್ಬರಕ್ಕೆ ಓರ್ವ ಯುವತಿ ಸಾವನ್ನಪ್ಪಿದ್ದಾಳೆ. ಇನ್ನೋರ್ವ ಯುವತಿಯನ್ನು ರಕ್ಷಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾನ್ಯ ಮೃತ ಯುವತಿ. ಯಶಸ್ವಿನಿ ಎಂಬ ಯುವತಿಯನ್ನು ರಕ್ಷಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಮೂರು ದಿನಗಳ ಹಿಂದೆ ಈ ಯುವತಿಯರು ಮಡಿಕೇರಿಯಿಂದ ಕಾಣೆಯಾಗಿದ್ದರು. ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಯುವತಿಯರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿತ್ತು.

ತಡರಾತ್ರಿ ಮಲ್ಫೆ ಬಳಿ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಯುವತಿಯರು ನೀರುಪಾಲಾಗಿದ್ದಾರೆ. ಇದನ್ನು ಗಮನಿಸಿದ ಈಶ್ವರ್ ಎಂಬುವವರು ಆಪತ್ಬಾಂಧನಂತೆ ಬಂದು ಯುವತಿಯರ ರಕ್ಷಣೆಗೆ ಧಾವಿಸಿದ್ದಾರೆ. ಓರ್ವ ಯುವತಿಯನ್ನು ರಕ್ಷಿಸಿದ್ದು, ಇನ್ನೋರ್ವ ಯುವತಿ ರಕ್ಷಣೆ ಸಾಧ್ಯವಾಗಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular