ಯುನೈಟೆಡ್ ಸ್ಟೇಟ್ಸ್‌ನ ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಸಾಮೂಹಿಕ ಶೂಟೌಟ್‌ನಲ್ಲಿ ಮೂವರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ, ಭಾನುವಾರ(ಆಗಸ್ಟ್ 6) ಆಗ್ನೇಯ ಭಾಗದಲ್ಲಿ ನಡೆದ ಗುಂಡಿನ ದಾಳಿಯ ಬಗ್ಗೆ ಜಿಲ್ಲೆಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ವಾಷಿಂಗ್ಟನ್ ಡಿಸಿ ಆಕ್ಟಿಂಗ್ ಪೊಲೀಸ್ ಮುಖ್ಯಸ್ಥ ಪಮೇಲಾ ಸ್ಮಿತ್ ಹೇಳಿದ್ದಾರೆ.
ಗುಂಡಿನ ದಾಳಿಗೆ ಪ್ರತಿಕ್ರಿಯಿಸಿದ ಅಧಿಕಾರಿಗಳು ರಾತ್ರಿ 9 ಗಂಟೆಯ ಮೊದಲು ಗುಡ್ ಹೋಪ್ ರಸ್ತೆ ಮತ್ತು 16 ನೇ ಸ್ಟ್ರೀಟ್ ಎಸ್‌ಇ ಬಳಿ ತಲುಪಿದ್ದಾರೆ ಸ್ಮಿತ್ ಪ್ರಕಾರ, ಅಧಿಕಾರಿಗಳು ಶೂಟೌಟ್‌ನಲ್ಲಿ ನಾಲ್ಕು ಪುರುಷರು ಮತ್ತು ಒಬ್ಬ ಮಹಿಳೆ ಸೇರಿ ಐದು ಮಂದಿ ಪತ್ತೆ ಮಾಡಿದ್ದಾರೆ.
ಗುಂಡಿನ ದಾಳಿ ನಡೆದ ಸ್ಥಳದಲ್ಲೇ ಇಬ್ಬರು ಗಂಡು ಮತ್ತು ಒಬ್ಬ ಹೆಣ್ಣು ಮಗು ಸಾವನ್ನಪ್ಪಿದೆ. ಇನ್ನಿಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿಗತಿ ತಿಳಿದುಬಂದಿಲ್ಲ.
ನಾನು ಸ್ಪಷ್ಟವಾಗಿ ಹೇಳುತ್ತೇನೆ, ಈ ಗನ್ ಹಿಂಸೆಯು ಅಗ್ರಸ್ಥಾನದಲ್ಲಿದೆ. ಇದು ಯುದ್ಧಭೂಮಿ ಅಲ್ಲ. ನಮ್ಮ ನಿವಾಸಿಗಳು ಸುರಕ್ಷಿತವಾಗಿರಬೇಕೆಂದು ನಾವು ಬಯಸುತ್ತೇವೆ ಎಂದು ಸ್ಮಿತ್ ತಿಳಿಸಿದ್ದು, ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಈ ಪ್ರಕರಣದಲ್ಲಿ ಸಂತ್ರಸ್ತರಿಗಾಗಿ ಅಧಿಕಾರಿಗಳು ಇನ್ನೂ ಶೋಧ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.