)
ಬೇಸರ ಕಡಿಮೆ ಮಾಡಲು ಮತ್ತು ಉತ್ಸಾಹಭರಿತ ಕೆಲಸದ ವಾತಾವರಣವನ್ನು ಸೃಷ್ಟಿಸಲು ಕಚೇರಿಯಲ್ಲಿ ತಮ್ಮ ಉದ್ಯೋಗಿಗಳಲ್ಲಿ ದೈಹಿಕ ವ್ಯಾಯಾಮವನ್ನು ಉತ್ತೇಜಿಸಲು ಕಂಪನಿಗಳು ಸೃಜನಶೀಲ ಮಾರ್ಗಗಳನ್ನು ರೂಪಿಸಿವೆ. ನೃತ್ಯಕ್ಕಿಂತ ಉತ್ತಮವಾದದ್ದು ಬೇರೆ ಇದೆಯೇ ?
ನೃತ್ಯವು ಅನೇಕ ಪ್ರಯೋಜನಗಳನ್ನು ಹೊಂದಿದೆ. ನೃತ್ಯ ಮಾಡುವುದರಿಂದ ಮನಸ್ಸು ಸಂತೋಷವಾಗುತ್ತದೆ. ಮಾತ್ರವಲ್ಲದೆ, ಇದೊಂದು ಅತ್ಯುತ್ತಮ ವ್ಯಾಯಾಮವೂ ಹೌದು. ಇದೀಗ ಕಚೇರಿಯೊಂದರಲ್ಲಿ ಪಂಜಾಬ್ನ ಸಾಂಪ್ರದಾಯಿಕ ಜಾನಪದ ನೃತ್ಯವಾದ ಭಾಂಗ್ರಾಕ್ಕೆ ಡಾನ್ಸ್ ಮಾಡುವ ವಿಡಿಯೋ ವೈರಲ್ ಆಗಿದೆ.
ಫರೀದಾಬಾದ್ನಲ್ಲಿರುವ ಫಿಸಿಕಲ್ ಫಿಟ್ನೆಸ್ ಮತ್ತು ಜಿಮ್ನ ಹೈಪ್ ದಿ ಜಿಮ್, ಸೆಂಟರ್ನ ಪಾಲುದಾರರಲ್ಲಿ ಒಬ್ಬರಾದ ಸಾಹಿಲ್ ಶರ್ಮಾ ಅವರು ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈವೆಂಟ್ ಕಾರ್ಪೊರೇಟ್ ಸಭೆ ಎಂದು ಪೋಸ್ಟ್ ಸೂಚಿಸಿದೆ. ಇದರಲ್ಲಿ ಉದ್ಯೋಗಿಗಳು ಭಾಂಗ್ರಾಕ್ಕೆ ಸ್ಟೆಪ್ಸ್ ಹಾಕುತ್ತಾ ಎಂಜಾಯ್ ಮಾಡಿದ್ದಾರೆ.
ಅಂದಹಾಗೆ, ಭಾರತದಾದ್ಯಂತ 60ಕ್ಕೂ ಹೆಚ್ಚು ಸ್ಥಳಗಳನ್ನು ಹೊಂದಿರುವ ಈ ಜಿಮ್ ಉತ್ತರ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಮತ್ತು ಕಿರಿಯ ಜಿಮ್ ನೆಟ್ವರ್ಕ್ ಎಂದು ಖ್ಯಾತಿ ಪಡೆದಿದೆ.