alex Certify ಉದ್ಯೋಗ ವಾರ್ತೆ : `IBPS’ ನಲ್ಲಿ 1,402 `ಸ್ಪೆಷಲಿಸ್ಟ್ ಆಫೀಸರ್’ ಹುದ್ದೆಗಳಿಗೆ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗ ವಾರ್ತೆ : `IBPS’ ನಲ್ಲಿ 1,402 `ಸ್ಪೆಷಲಿಸ್ಟ್ ಆಫೀಸರ್’ ಹುದ್ದೆಗಳಿಗೆ ಅರ್ಜಿ ಆಹ್ವಾನ

ನವದೆಹಲಿ : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ, ಸಾರ್ವಜನಿಕ ವಲಯದ ಬ್ಯಾಂಕುಗಳ ವಿವಿಧ ಇಲಾಖೆಗಳಲ್ಲಿ 1402 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಐಬಿಪಿಎಸ್ ಅಧಿಸೂಚನೆ ಹೊರಡಿಸಿದೆ.

ಹುದ್ದೆಗಳಿಗೆ ಅನುಗುಣವಾಗಿ ಎಂಜಿನಿಯರಿಂಗ್, ಪದವಿ ಮತ್ತು ಪಿಜಿ ಪೂರ್ಣಗೊಳಿಸಿದವರು ಈ ಉದ್ಯೋಗಗಳಿಗೆ ಅರ್ಹರಾಗಿರುತ್ತಾರೆ. ಅರ್ಜಿಗಳನ್ನು ಆಗಸ್ಟ್ 21 ರೊಳಗೆ ಆನ್ ಲೈನ್ ನಲ್ಲಿ ಸಲ್ಲಿಸಬೇಕು. ಆಗಸ್ಟ್ 1, 2023ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳ ವಯಸ್ಸು 20 ರಿಂದ 30 ವರ್ಷಗಳ ನಡುವೆ ಇರಬೇಕು. ಎಸ್ಸಿ, ಎಸ್ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 175 ರೂ. ಇತರರಿಗೆ 850 ರೂ. ವೆಬ್ಸೈಟ್ನಲ್ಲಿ ಹೆಚ್ಚಿನ ವಿವರಗಳಿಗಾಗಿ: https://www.ibps.in/

ಐಬಿಪಿಎಸ್ ಎಸ್ಒ 2023 ಹುದ್ದೆಗಳ ವಿವರ

ಅಗ್ರಿಕಲ್ಚರಲ್ ಫೀಡ್ ಆಫೀಸರ್-(ಸ್ಕೇಲ್-1): 500 ಹುದ್ದೆಗಳು

ಎಚ್ಆರ್/ಪರ್ಸನಲ್ ಆಫೀಸರ್-(ಸ್ಕೇಲ್-1): 31 ಹುದ್ದೆಗಳು

ಐಟಿ ಆಫೀಸರ್ (ಸ್ಕೇಲ್-1): 120 ಹುದ್ದೆಗಳು

ಲಾ ಆಫೀಸರ್ (ಸ್ಕೇಲ್-1): 10 ಹುದ್ದೆಗಳು

ಮಾರ್ಕೆಟಿಂಗ್ ಆಫೀಸರ್ (ಸ್ಕೇಲ್-1): 700 ಹುದ್ದೆಗಳು

ಮಾರ್ಕೆಟಿಂಗ್ ಆಫೀಸರ್ (ಸ್ಕೇಲ್-1): 41 ಹುದ್ದೆಗಳು

ಆನ್ಲೈನ್ ಪ್ರಿಲಿಮಿನರಿ ಪರೀಕ್ಷೆಯನ್ನು ಡಿಸೆಂಬರ್ 30 ಮತ್ತು 31 ರಂದು ನಡೆಸಲಾಗುವುದು.

ಜನವರಿಯಲ್ಲಿ ಫಲಿತಾಂಶ ಪ್ರಕಟವಾಗಲಿದೆ.

ಮುಖ್ಯ ಪರೀಕ್ಷೆ ಜನವರಿ 28 ರಂದು ನಡೆಯಲಿದೆ.

ಫೆಬ್ರವರಿ/ಮಾರ್ಚ್ ನಲ್ಲಿ ಸಂದರ್ಶನ ನಡೆಯಲಿದೆ.

ತಾತ್ಕಾಲಿಕ ಹಂಚಿಕೆಯ ದಿನಾಂಕವನ್ನು ಏಪ್ರಿಲ್ ನಲ್ಲಿ ಪ್ರಕಟಿಸಲಾಗುವುದು.

ಬ್ಯಾಂಕ್ ಕೆಲಸಕ್ಕೆ ಸೇರುವ ಸಮಯದಲ್ಲಿ ಅಭ್ಯರ್ಥಿಗಳು ಸಿಬಿಲ್ ಸ್ಕೋರ್ 650 ಅನ್ನು ಕಾಪಾಡಿಕೊಳ್ಳಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...