ಮೋದಿ ಸರ್ ನೇಮ್ ಮಾನನಷ್ಟ ಪ್ರಕರಣ: ಕ್ಷಮೆ ಕೇಳಲು ನಿರಾಕರಿಸಿದ ರಾಹುಲ್ ಗಾಂಧಿ, ಸುಪ್ರೀಂ ಕೋರ್ಟ್ ಗೆ ಮರು ಅಫಿಡವಿಟ್ ಸಲ್ಲಿಕೆ

ನವದೆಹಲಿ: ‘ಮೋದಿ ಉಪನಾಮ’ ಟೀಕೆ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಸುಪ್ರೀಂ ಕೋರ್ಟ್‌ಗೆ ಮರು ಅಫಿಡವಿಟ್ ಸಲ್ಲಿಸಿದ್ದಾರೆ ಮತ್ತು ಕ್ಷಮೆಯಾಚಿಸಲು ನಿರಾಕರಿಸಿದ್ದಾರೆ. ತಮ್ಮ 63 ಪುಟಗಳ ಅಫಿಡವಿಟ್‌ನಲ್ಲಿ, ಈ ಪ್ರಕರಣವು ‘ಅಸಾಧಾರಣ ವರ್ಗ’ ದ ಅಡಿಯಲ್ಲಿ ಬರುವುದಿಲ್ಲ ಎಂದು ಗಾಂಧಿ ಹೇಳಿದ್ದಾರೆ.

ಅದು ಅವರಿಗೆ ಪರಿಹಾರ ಅಥವಾ ಶಿಕ್ಷೆಯ ತಡೆಗೆ ಅರ್ಹವಾಗಿದೆ. ತಾನು ತಪ್ಪಿತಸ್ಥನಲ್ಲ ಎಂದು ಪ್ರತಿಪಾದಿಸಿದ ವಯನಾಡ್ ಮಾಜಿ ಸಂಸದ ರಾಹುಲ್ ಗಾಂಧಿ, ಶಿಕ್ಷೆಯು ಸಮರ್ಥನೀಯವಲ್ಲ. ಕ್ಷಮೆಯಾಚಿಸಬೇಕಾದರೆ ಅದನ್ನು ಮೊದಲೇ ಮಾಡುತ್ತಿದ್ದುದಾಗಿ ಎಂದು ಹೇಳಿದ್ದಾರೆ.

ದೂರುದಾರ, ಗುಜರಾತ್ ಬಿಜೆಪಿ ಶಾಸಕ ಪೂರ್ಣೇಶ್ ಈಶ್ವರಭಾಯಿ ಮೋದಿ ಅವರು ಸುಪ್ರೀಂ ಕೋರ್ಟ್‌ಗೆ ನೀಡಿದ ಉತ್ತರದಲ್ಲಿ ಗಾಂಧಿ ಕ್ಷಮೆಯಾಚಿಸಲು ನಿರಾಕರಿಸಿದ ಕಾರಣಕ್ಕಾಗಿ ‘ಅಹಂಕಾರಿ’ ಎಂಬಂತಹ ನಿಂದೆಯ ಪದಗಳನ್ನು ಬಳಸಿದ್ದಾರೆ ಎಂದು ಗಾಂಧಿಯವರ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

ಯಾವುದೇ ತಪ್ಪಿಗಾಗಿ ಕ್ಷಮೆಯಾಚಿಸಲು ಕೇಳುವುದು ಪ್ರಜಾಪ್ರತಿನಿಧಿ ಕಾಯಿದೆಯಡಿಯಲ್ಲಿನ ಪರಿಣಾಮಗಳನ್ನು ಬಳಸುವುದು ನ್ಯಾಯಾಂಗ ಪ್ರಕ್ರಿಯೆಯ ಸಂಪೂರ್ಣ ನಿಂದನೆಯಾಗಿದೆ ಮತ್ತು ಈ ನ್ಯಾಯಾಲಯವು ಅದನ್ನು ಪರಿಗಣಿಸಬಾರದು ಎಂದು ಗಾಂಧಿಯವರ ಅಫಿಡವಿಟ್ ಹೇಳಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read