ನವದೆಹಲಿ: ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ ಉತ್ಪನ್ನಗಳ ಬ್ಯಾಸ್ಕೆಟ್ 1,800 ಔಷಧಿಗಳು ಮತ್ತು 285 ಶಸ್ತ್ರಚಿಕಿತ್ಸಾ ಉಪಕರಣಗಳಿಗೆ ಏರಿದೆ.
ಈ ಉತ್ಪನ್ನಗಳು ಮಾರುಕಟ್ಟೆಗೆ ಹೋಲಿಸಿದರೆ ಶೇ.50ರಿಂದ 90ರಷ್ಟು ಕಡಿಮೆ ಬೆಲೆಯಲ್ಲಿ ಲಭ್ಯ. ಈ ವರ್ಷ ಡಿಸೆಂಬರ್ 31 ರೊಳಗೆ ದೇಶದಲ್ಲಿ 10,000 ಜನೌಷಧಿ ಕೇಂದ್ರಗಳನ್ನು ತೆರೆಯಲು ಸರ್ಕಾರ ನಿರ್ಧರಿಸಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ತಿಳಿಸಿದೆ.
ಕಳೆದ ತಿಂಗಳವರೆಗೆ ದೇಶಾದ್ಯಂತ ಒಟ್ಟು 9,500 ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ಕೇಂದ್ರಗಳ ಸಂಖ್ಯೆ 100 ಪಟ್ಟು ಹೆಚ್ಚಾಗಿದೆ ಮತ್ತು ಮಾರಾಟವು 170 ಪಟ್ಟು ಹೆಚ್ಚಾಗಿದೆ ಎಂದು ಸಚಿವಾಲಯ ಹೇಳಿದೆ.