alex Certify ಮಧ್ಯಾಹ್ನ ಊಟ ಮಾಡಿದ ತಕ್ಷಣ ನಿದ್ದೆ ಮಾಡುವ ಅಭ್ಯಾಸವಿದೆಯೇ…..? ಇದರಿಂದಾಗಬಹುದು ಗಂಭೀರ ಸಮಸ್ಯೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಧ್ಯಾಹ್ನ ಊಟ ಮಾಡಿದ ತಕ್ಷಣ ನಿದ್ದೆ ಮಾಡುವ ಅಭ್ಯಾಸವಿದೆಯೇ…..? ಇದರಿಂದಾಗಬಹುದು ಗಂಭೀರ ಸಮಸ್ಯೆ…..!

ಹೆಚ್ಚಿನ ಜನರು ಮಧ್ಯಾಹ್ನ ಊಟದ ನಂತರ 2-3 ಗಂಟೆಗಳ ಕಾಲ ಮಲಗಲು ಇಷ್ಟಪಡುತ್ತಾರೆ. ಅದರಲ್ಲೂ ವಿಶೇಷವಾಗಿ ಬೇಸಿಗೆಯಲ್ಲಿ ಮಧ್ಯಾಹ್ನ ವಿಶ್ರಾಂತಿ ಪಡೆಯುತ್ತಾರೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮನೆಗೆಲಸ ಮಾಡಿ ಆಯಾಸಗೊಂಡಿರುತ್ತಾರೆ. ಹಾಗಾಗಿ ಊಟದ ನಂತರ ಮಲಗುವ ಅಭ್ಯಾಸವಾಗಿಬಿಡುತ್ತದೆ. ಆಯುರ್ವೇದದ ಪ್ರಕಾರ, ಆಹಾರ ಸೇವಿಸಿದ ತಕ್ಷಣ ಮಲಗುವ ತಪ್ಪನ್ನು ಎಂದಿಗೂ ಮಾಡಬಾರದು. ಏಕೆಂದರೆ ಇದು ಆರೋಗ್ಯ ಮತ್ತು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಊಟದ ನಂತರ ನಿದ್ದೆ ಮಾಡದೇ ಇರುವುದು ಅಸಾಧ್ಯವೆನಿಸಿದರೆ ಕೆಲವೊಂದು ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಊಟ ಮಾಡಿದ ತಕ್ಷಣ ಮಲಗಬಾರದು. ಏಕೆಂದರೆ ಇದು ದೇಹದಲ್ಲಿ ಕೊಬ್ಬು ಮತ್ತು ನೀರಿನ ಅಂಶವನ್ನು ಹೆಚ್ಚಿಸುತ್ತದೆ. ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಹಾನಿಗೊಳಗಾಗಬಹುದು. ಚಯಾಪಚಯ ದುರ್ಬಲವಾಗಬಹುದು.

ಮಧುಮೇಹ, ಬೊಜ್ಜು, ತೂಕ ಹೆಚ್ಚಾಗುವುದು ಮತ್ತು ಕೊಲೆಸ್ಟ್ರಾಲ್ ಸಮಸ್ಯೆಗಳು ಬರುವ ಸಾಧ್ಯತೆ ಇರುತ್ತದೆ. ಆಯುರ್ವೇದದ ಪ್ರಕಾರ ವಯಸ್ಸಾದವರು ಮತ್ತು ಮಕ್ಕಳಂತಹ ಹೆಚ್ಚು ದೈಹಿಕ ಶ್ರಮವನ್ನು ಮಾಡುವವರು 48 ನಿಮಿಷಗಳ ಕಾಲ ನಿದ್ರೆ ಮಾಡಬಹುದು. ಯಾರು ಮಧ್ಯಾಹ್ನದ ಊಟ ಮಾಡಿಲ್ಲವೋ ಅಂಥವರು ಕೂಡ ಮಲಗಬಹುದು.

ವಜ್ರಾಸನದಲ್ಲಿ ಕುಳಿತುಕೊಳ್ಳಿ

ಊಟವಾದ ತಕ್ಷಣ ಮಲಗುವ ಬದಲು 15-20 ನಿಮಿಷಗಳ ಕಾಲ ವಜ್ರಾಸನದಲ್ಲಿ ಕುಳಿತುಕೊಳ್ಳಬೇಕು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಇದು ಆಹಾರವನ್ನು ತ್ವರಿತವಾಗಿ ಜೀರ್ಣಿಸಿಕೊಳ್ಳಲು ಸಹಕಾರಿಯಾಗುತ್ತದೆ. ಅಸಿಡಿಟಿ, ಅಜೀರ್ಣ, ಮಲಬದ್ಧತೆ ಮತ್ತು ಹೊಟ್ಟೆ ಉಬ್ಬರಿಸುವಿಕೆ ಉಂಟಾಗುವುದಿಲ್ಲ. ಊಟದ ನಂತರ ಕನಿಷ್ಠ 100 ಹೆಜ್ಜೆಗಳನ್ನಾದರೂ ನಡೆಯಲೇಬೇಕು.

ಆಹಾರವನ್ನು ಸೇವಿಸಿದ ನಂತರ ಯಾವುದೇ ಭಾರೀ ವ್ಯಾಯಾಮವನ್ನು ಮಾಡಬೇಕಾಗಿಲ್ಲ. ಕೇವಲ ಒಂದು ವಾಕ್ ಹೋಗಿ. ಊಟದ ನಂತರ ಯಾವಾಗಲೂ ಎಡಭಾಗದಲ್ಲಿ ಮಲಗಿಕೊಳ್ಳಿ. ಹೊಟ್ಟೆ ತುಂಬ ಊಟ ಮಾಡಿದ ತಕ್ಷಣ ಮಲಗಿ ನಿದ್ರಿಸುವುದರಿಂದ ಅನೇಕ ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಗಂಭೀರ ಕಾಯಿಲೆಗಳಿಗೂ ಇದು ಕಾರಣವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...