ಬೆಂಗಳೂರು : ಉಡುಪಿಯ ಕಾಲೇಜಿನ ಶೌಚಾಲಯದಲ್ಲಿ ಹಿಂದೂ ಯುವತಿಯರ ವಿಡಿಯೋ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಕಾಂಗ್ರೆಸ್ ಟ್ವಿಟರ್ ನಲ್ಲಿ ವಾಗ್ದಾಳಿ ನಡೆಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ, ಇರುವೆಯನ್ನು ಆನೆ ಎಂದು ನಂಬಿಸಲು ಹೊರಟಿದ್ದ ರಾಜ್ಯ ಬಿಜೆಪಿಹಾಗೂ ಬಿಜೆಪಿಯ ಟೂಲ್ ಕಿಟ್ ಗ್ಯಾಂಗಿನ ಕನಸಿಗೆ ಮತ್ತೊಮ್ಮೆ ತಣ್ಣೀರು ಎರಚಿದ್ದಾರೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಹಾಗೂ ಬಿಜೆಪಿ ನಾಯಕಿ ಖುಷ್ಬು ಎಂದು ವಾಗ್ದಾಳಿ ನಡೆಸಿದೆ.
ಉಡುಪಿ ಕಾಲೇಜಿನ ಘಟನೆಯು ಷಡ್ಯಂತ್ರವಲ್ಲ,ವಿದ್ಯಾರ್ಥಿನೀಯರ ಮೊಬೈಲ್ ಗಳಲ್ಲಿ ಯಾವುದೇ ವಿಡಿಯೋಗಳು ಪತ್ತೆಯಾಗಿಲ್ಲ,ಸಾಮಾಜಿಕ ಜಾಲತಾಣದಲ್ಲಿ ನಕಲಿ ವಿಡಿಯೋ ಹರಿಬಿಡಲಾಗಿದೆ,ಪೊಲೀಸರು ಸಮರ್ಪಕ ತನಿಖೆ ನಡೆಸಿದ್ದಾರೆ, ಸುಳ್ಳು ಸುದ್ದಿ ಹಬ್ಬಿಸುವುದನ್ನು ಬಿಡಬೇಕು. ಇದನ್ನು ಕೇವಲ ಹುಡುಗಾಟಿಕೆಯ ಘಟನೆಯಾಗಿಯಷ್ಟೇ ನೋಡಬೇಕು ಹೊರತು ರಾಜಕೀಯಕ್ಕೆ ಬಳಸಬಾರದು ಎಂಬ ಸ್ವತಃ ಬಿಜೆಪಿ ನಾಯಕಿಯ ಸಂದೇಶವನ್ನು ಬಿಜೆಪಿಗರು ಅರಗಿಸಿಕೊಳ್ಳಲು ಸಾಧ್ಯವೇ? ಸರ್ಕಾರವನ್ನು ವಿರೋಧಿಸಲು ವಿಷಯಗಳಿಲ್ಲದೆ ಕಂಗಲಾಗಿರುವ ಬಿಜೆಪಿ ಈಗ ಬಾತ್ ರೂಮಿನ ರಾಜಕೀಯಕ್ಕೆ ಹೊರಟಿದೆ.