alex Certify ಪಡಿತರದಾರರ ಗಮನಕ್ಕೆ : ಅನ್ನಭಾಗ್ಯದ ಹಣ ಇನ್ನೂ ಅಕೌಂಟ್ ಗೆ ಬಂದಿಲ್ವಾ..? ಇಲ್ಲಿದೆ ಅಸಲಿ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಡಿತರದಾರರ ಗಮನಕ್ಕೆ : ಅನ್ನಭಾಗ್ಯದ ಹಣ ಇನ್ನೂ ಅಕೌಂಟ್ ಗೆ ಬಂದಿಲ್ವಾ..? ಇಲ್ಲಿದೆ ಅಸಲಿ ಕಾರಣ

ಬೆಂಗಳೂರು : ಹೆಚ್ಚುವರಿ 5 ಅಕ್ಕಿ ಬದಲು ಹಣ ನೀಡುವ ವ್ಯವಸ್ಥೆಗೆ ರಾಜ್ಯ ಸರ್ಕಾರ ಚಾಲನೆ ನೀಡಿದ್ದು, ಪಡಿತರರ ಖಾತೆಗೆ ಸರ್ಕಾರ ನೇರವಾಗಿ ಹಣ ವರ್ಗಾವಣೆ ಮಾಡುತ್ತಿದೆ. ಆದರೆ ಕೆಲವು ಕಡೆ ಫಲಾನುಭವಿಗಳು ಇನ್ನೂ ಕೂಡ ಖಾತೆಗೆ ಹಣ ಜಮೆಯಾಗಿಲ್ಲ. ಅನ್ನಭಾಗ್ಯದ ಹಣ ಅಕೌಂಟ್ ಗೆ ಬಂದಿಲ್ಲ ಎಂದಾದರೆ ನಿಮಗೆ ಈ ವಿಚಾರಗಳು ಗೊತ್ತಿರಬೇಕು. ತಪ್ಪದೇ ಈ ಕೆಲಸ ನೀವು ಮಾಡಬೇಕು.

ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡದೆ ಇರುವುದು ಅಥವಾ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡದೆ ಇರುವುದರಿಂದ ನಿಮಗೆ ಹಣ ಬಂದಿಲ್ಲ. ಈ ಬಗ್ಗೆ ಗೊಂದಲಗಳಿದ್ದರೆ ನೀವು ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅನ್ನಭಾಗ್ಯ ಸ್ಕೀಮ್ ಪಡೆಯಲು ತಮ್ಮ ರೇಷನ್ ಕಾರ್ಡ್ ಅರ್ಹವಾಗಿದೆಯೇ ಎಂಬುದನ್ನು ಚೆಕ್ ಮಾಡಬಹುದು. DBT ಕರ್ನಾಟಕ ಆಪ್ ಕೂಡ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಹಣ ವರ್ಗಾವಣೆ ಆಗಿರುವ ವಿವರವನ್ನು ಚೆಕ್ ಮಾಡಿ ತಿಳಿದುಕೊಳ್ಳಬಹುದು.

ಅನ್ನಭಾಗ್ಯದ ಹಣ ಅಕೌಂಟ್ ಗೆ ಬಂದಿಲ್ಲವಾದರೆ ತಪ್ಪದೇ ಈ ಕೆಲಸವನ್ನು ನೀವು ಮಾಡಬೇಕು. ಇಲ್ಲವಾದಲ್ಲಿ ಅಕೌಂಟ್ ಗೆ ಹಣ ಬರುವುದಿಲ್ಲ. ಸ್ಟೇಟಸ್ ಚೆಕ್ ಮಾಡುವಾಗ ಕೆಲವರಿಗೆ ಆಧಾರ್ ಕಾರ್ಡನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕು ಅಥವಾ KYC ಅಪ್ಡೇಟ್ ಮಾಡಿಸಬೇಕು ಎನ್ನುವ ಸೂಚನೆ ಸಿಗುತ್ತಿದೆ. ಈ ಕೆಲಸ ಮಾಡಿಲ್ಲವಾದರೆ ನಿಮಗೆ ಹಣ ಬರೋದಿಲ್ಲ. ಈ ಎಲ್ಲಾ ಕೆಲಸ ಮಾಡಿದವರಿಗೆ PAV response not at received ಎಂದು ಕಾಣುತ್ತಿದೆ. ಈ ರೀತಿ ಬಂದರೆ ನೀವು ಕನಫ್ಯೂಸ್ ಆಗಬೇಡಿ. PAV ಎಂದರೆ Payment adjustment voture ಎಂದರ್ಥ. ಸ್ಟೇಟಸ್ ಚೆಕ್ ಮಾಡುವಾಗ ಈ ರೀತಿ ಬಂದರೆ, ಬ್ಯಾಂಕಿನ ಸಿಬ್ಬಂದಿಗಳು ಇನ್ನು ಹಣ ಜಮಾ ಆಗಿರುವ ಮಾಹಿತಿಯನ್ನು ನೀಡಿಲ್ಲ ಎಂಬ ಎಂದರ್ಥ. ಈ ರೀತಿ ಬಂದರೆ ನಿಮ್ಮ ಹಣ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ, ಕೆಲವೇ ದಿನಗಳಲ್ಲಿ ಹಣ ವರ್ಗಾವಣೆಯಾಗುತ್ತದೆ ಎಂದು ಅರ್ಥ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...