ಬೆಂಗಳೂರು: ಎಂಬಿಬಿಎಸ್ ದುಬಾರಿಯಾಗಿದ್ದು, ಖಾಸಗಿ ಕಾಲೇಜುಗಳಲ್ಲಿ ವೈದ್ಯಕೀಯ ಕೋರ್ಸ್ ಶುಲ್ಕ ಶೇಕಡ 10ರಷ್ಟು ಏರಿಕೆ ಮಾಡಿದೆ.
ಸರ್ಕಾರ ಕಳೆದ ವರ್ಷ ಅಲ್ಪಸಂಖ್ಯಾತ ಮೆಡಿಕಲ್ ಕಾಲೇಜುಗಳಿಗೆ ಮಾತ್ರ ಶೇಕಡ ಹತ್ತರಷ್ಟು ಶುಲ್ಕ ಹೆಚ್ಚಳ ಮಾಡಲಾಗಿತ್ತು. ಖಾಸಗಿ ಕಾಲೇಜು ಮತ್ತು ಸರ್ಕಾರಿ ಕೋಟಾದ ಸೀಟುಗಳ ಶುಲ್ಕ ಹೆಚ್ಚಳ ಕೈಬಿಡಲಾಗಿತ್ತು. ಇದನ್ನು ಸರಿದೂಗಿಸಲು ಈಗ ಸರ್ಕಾರ ಖಾಸಗಿ ಕಾಲೇಜುಗಳಲ್ಲಿಯೂ ವೈದ್ಯಕೀಯ ಕೋರಸ್ ಶುಲ್ಕವನ್ನು ಶೇ. 10 ರಷ್ಟು ಹೆಚ್ಚಳ ಮಾಡಿದೆ.
ಇದರಿಂದಾಗಿ ಖಾಸಗಿ ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ಮತ್ತಷ್ಟು ದುಬಾರಿಯಾಗಲಿದೆ. ಇಂಜಿನಿಯರಿಂಗ್ ಕೋರ್ಸ್ ಗಳಿಗೆ ಶೇಕಡ 10ರಷ್ಟು ಶುಲ್ಕ ಹೆಚ್ಚಳ ಮಾಡಿದ ಬೆನ್ನಲ್ಲೇ ಮೆಡಿಕಲ್ ಕೋರ್ಸ್ ಶುಲ್ಕವನ್ನೂ ಶೇಕಡ 10 ರಷ್ಟು ಹೆಚ್ಚಳ ಮಾಡಲಾಗಿದೆ.
ಸರ್ಕಾರಿ ಕಾಲೇಜಿನ ಶುಲ್ಕದಲ್ಲಿ ಯಾವುದೇ ಏರಿಕೆ ಮಾಡಲಾಗಿಲ್ಲ. ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಈ ವರ್ಷ ಕೂಡ 59,850 ರೂ. ಶುಲ್ಕ ಇರಲಿದೆ. ಖಾಸಗಿ ವೈದ್ಯ ಕಾಲೇಜುಗಳ ಸರ್ಕಾರಿ ಕೋಟಾ 10.80 ಲಕ್ಷ ರೂ. ಆಗಿದೆ.
ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ 38,200 ಶುಲ್ಕವಿದ್ದು, ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ಶುಲ್ಕ 91,796 ರೂ ಇದ್ದು, ಇದಕ್ಕೆ ಶೇಕಡ 10 ರಷ್ಟು ಹೆಚ್ಚಳ ಮಾಡಲಾಗಿದೆ.