ಬೆಂಗಳೂರು : ಹಾಲು ಉತ್ಪಾದಕರಿಗೆ ಬಮೂಲ್ ಭರ್ಜರಿ ಸಿಹಿಸುದ್ದಿ ನೀಡಿದ್ದು, ಆಗಸ್ಟ್ 1 ರಿಂದ ಪ್ರತಿ ಲೀಟರ್ ಹಾಲಿಗೆ ಹೆಚ್ಚುವರಿಯಾಗಿ 3 ರೂ. ನೀಡಲಾಗುವುದು ಎಂದು ತಿಳಿಸಿದೆ.
ಪ್ರತಿ ಲೀಟರ್ ಹಾಲಿನ ದರವನ್ನು 3 ರೂ. ಹೆಚ್ಚಿಸಿರುವುದರಿಂದ ಹಾಲು ಉತ್ಪಾದಕರಿಗೆ ಆಗಸ್ಟ್ 1 ರಿಂದ ಪ್ರತಿ ಲೀಟರ್ ಹಾಲಿಗೆ 39.50 ರೂ. ಸಿಗಲಿದ್ದು, 1.12 ಲಕ್ಷ ಹಾಲು ಉತ್ಪಾದಕರಿಗೆ ಅನುಕೂಲವಾಗಲಿದೆ ಎಂದು ಬಮೂಲ್ ಅಧ್ಯಕ್ಷ ಎಚ್.ಪಿ ರಾಜ್ ಕುಮಾರ್ ತಿಳಿಸಿದ್ದಾರೆ.
ಪ್ರತಿ ಲೀಟರ್ ಹಾಲಿನಿಂದ ಸಂಗ್ರಹಿಸುವ 3 ರೂ. ನೇರವಾಗಿ ರೈತರಿಗೆ ಕೊಡಲಾಗುವುದು, ಈ ಹಿಂದೆ ಪ್ರತಿ ಲೀಟರ್ ಹಾಲಿಗೆ ಬಮೂಲ್ 31.50 ರೂ. ಕೊಡುತ್ತಿತ್ತು. ರಾಜ್ಯ ಸರ್ಕಾರ ಪ್ರೋತ್ಸಾಹಧನವಾಗಿ 5 ರೂ. ನೀಡುತ್ತಿತ್ತು. ಒಟ್ಟು 36.50 ರೈತರಿಗೆ ಸಿಗುತ್ತಿತ್ತು. ಆಗಸ್ಟ್ 1 ರಿಂದ 3 ರೂ. ಹೆಚ್ಚುವರಿಯಾಗಿ ನೀಡಲಾಗುವುದು ಎಂದು ಹೇಳಿದ್ದಾರೆ.