ಬೆಂಗಳೂರು : ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಬಂಧಿಸಿದ್ದು, ವಿಚಾರಣೆ ನಡೆಸಿದ ಎನ್ ಐ ಎ ವಿಶೇಷ ಕೋರ್ಟ್ ಐವರು ಶಂಕಿತ ಉಗ್ರರನ್ನು ಏಳು ದಿನಗಳ ಕಾಲ ಸಿಸಿಬಿ ಪೊಲೀಸ್ ಕಸ್ಟಡಿಗೆ ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿರುವ ಆರೋಪಿ -2 ಜುನೈದ್ ಪತ್ತೆಯಾಗಿ ಸಿಸಿಬಿ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಜುನೈದ್ ಎಂಬಾತನ ಪತ್ತೆಗಾಗಿ ಬೆಂಗಳೂರು ಪೊಲೀಸರು ಔಟ್ ಲುಕ್ ಜಾರಿಗೊಳಿಸಿದ್ದು, ಆತ ದುಬೈನಲ್ಲಿ ತಲೆಮರೆಸಿಕೊಂಡಿದ್ದಾಗಿ ಎನ್ನಲಾಗಿದೆ.
ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಬೆಂಗಳೂರಿನ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ 7 ಶಂಕಿತ ಉಗ್ರರ ಪೈಕಿ ಐವರನ್ನು ಬಂಧಿಸಿದ್ದು, ಇಬ್ಬರು ಪರಾರಿಯಾಗಿದ್ದಾರೆ. ಆರೋಪಿ ನಂಬರ್-1 ನಜೀರ್ ಹಾಗೂ ಆರೋಪಿ ನಂಬರ್ 2 ಸದ್ಯ ಪರಾರಿಯಾಗಿದ್ದು, 3 ಸುಹೇಲ್, 4 ಉಮರ್, 5, ಜಾಹೀದ್, 6 ಮುದಾಸಿರ್, ಫೈಜಲ್ ಆರೆಸ್ಟ್ ಆಗಿದ್ದಾರೆ.
ಬೆಂಗಳೂರಿನಲ್ಲಿ ಶಂಕಿತ ಉಗ್ರರ ಬಂಧನ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರಿಗೆ ಸ್ಪೋಟಕ ಮಾಹಿತಿ ಲಭ್ಯವಾಗಿದ್ದು, ಐವರು ಶಂಕಿತ ಉಗ್ರರ ಬಳಿ ಸಿಕ್ಕಿರುವುದು ವಾಕಿಟಾಕಿಗಳಲ್ಲ, ಬದಲಿಗೆ ಅವು ಸುಧಾರಿತ ಸ್ಪೋಟಕಗಳನ್ನು ಸ್ಪೋಟಿಸಲು ಅನುಕೂಲವಾಗುವಂತೆ ಮಾರ್ಪಾಡುಗೊಳಿಸಿದ ಡಿವೈಸ್ ಗಳು ಎಂಬ ಅನುಮಾನ ಮೂಡಿಸಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರಿಗೆ ಆರೋಪಿಗಳ ಮನೆಯಲ್ಲಿ ವಾಕಿಟಾಕಿಗಳು ಪತ್ತೆಯಾಗಿದ್ದವು ಇವುಗಳನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಇವು ವಾಕಿಟಾಕಿಗಳಲ್ಲ. ಬದಲಾಗಿ ಬಾಂಬ್ ಸ್ಪೋಟಕ್ಕೆ ಅನುಕೂಲವಾಗುವಂತೆ ಮಾರ್ಪಾಡು ಮಾಡಿದ ಡಿವೈಸ್ ಗಳು ಎಂದು ತಿಳಿದುಬಂದಿದೆ.
ಶಂಕಿತ ಉಗ್ರರು ಪೂರ್ವಯೋಜಿತ ಸಂಚಿನಂತೆ ಜನಸಂದಣಿ ಪ್ರದೇಶಗಳಲ್ಲಿ ಬಾಂಬ್ ಇಟ್ಟು, ಆಸ್ಥಳದಲ್ಲೇ ವಾಕಿ ಟಾಕಿ ಇಟ್ಟು, ಮತ್ತೊಂದು ವಾಕಿಟಾಕಿಯಿಂದ ಸಂಪರ್ಕಿಸಿದಾಗ ಬಾಂಬ್ ಸಿಡಿಸುವ ಹೊಸ ತಂತ್ರ ರೂಪಿಸಿದ್ದರು ಎನ್ನಲಾಗುತ್ತಿದೆ.