HomeKarnatakaಮಾಜಿ ಸಚಿವ ಮುನಿರತ್ನರಿಂದ ಹನಿ ಟ್ರ್ಯಾಪ್: ಬೆಂಬಲಿಗನಿಂದ ಗಂಭೀರ ಆರೋಪ

ಮಾಜಿ ಸಚಿವ ಮುನಿರತ್ನರಿಂದ ಹನಿ ಟ್ರ್ಯಾಪ್: ಬೆಂಬಲಿಗನಿಂದ ಗಂಭೀರ ಆರೋಪ

ಬೆಂಗಳೂರು: ಸಚಿವರಾಗಿದ್ದ ಸಂದರ್ಭದಲ್ಲಿ ಮುನಿರತ್ನ ಹನಿ ಟ್ರ್ಯಾಪ್ ಮಾಡಿಸುತ್ತಿದ್ದರು. ಇದಕ್ಕಾಗಿಯೇ ಸ್ಟುಡಿಯೋ ಇಟ್ಟುಕೊಂಡಿದ್ದಾರೆ ಎಂದು ಅವರ ಬೆಂಬಲಿಗ, ಬಿಬಿಎಂಪಿ ಮಾಜಿ ಕಾರ್ಪೊರೇಟರ್ ವೇಲು ನಾಯ್ಕರ್ ಗಂಭೀರ ಆರೋಪ ಮಾಡಿದ್ದಾರೆ.

ಮುನಿರತ್ನ ಆಪ್ತರ ಗುಂಪಿನಲ್ಲಿದ್ದ ವೇಲು ನಾಯ್ಕರ್, ಮೋಹನ್ ಕುಮಾರ್, ಶ್ರೀನಿವಾಸಮೂರ್ತಿ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕರಾಗಿರುವ ಮುನಿರತ್ನ ಬೆಂಬಲಿಗರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವಲ್ಲಿ ಡಿಕೆ ಬ್ರದರ್ಸ್ ಯಶಸ್ವಿಯಾಗಿದ್ದು, ಮುನಿರತ್ನ ಅವರಿಗೆ ಶಾಕ್ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಕ್ಷ ಸೇರ್ಪಡೆ ಸಂದರ್ಭದಲ್ಲಿ ಮಾತನಾಡಿದ ವೇಲು ನಾಯ್ಕರ್, ಸಚಿವರಾಗಿದ್ದ ವೇಳೆ ಮುನಿರತ್ನ ಹನಿ ಟ್ರ್ಯಾಪ್ ಮಾಡಿಸುತ್ತಿದ್ದರು. ಇದಕ್ಕಾಗಿ ಸ್ಟುಡಿಯೋ ಹೊಂದಿದ್ದಾರೆ. ನಿಮ್ಮದು ಈಸ್ಟ್ ಮನ್ ಕಲರ್ ಪಿಕ್ಚರ್ ಇದೆ. ತೋರಿಸಲಾ ಇಲ್ಲ ಕೆಲಸ ಮಾಡ್ತೀರಾ ಎಂದು ಹೆದರಿಸುತ್ತಿದ್ದರು. ನಿರ್ಮಾಪಕರಾಗಿ ಅವರು ನಿರ್ಮಿಸಿದ ಮೊದಲ ಚಿತ್ರ ‘ಆಂಟಿ ಪ್ರೀತ್ಸೆ’. ಅವರು ಸಚಿವರಾದ ಮೇಲೆ ವಿಧಾನಸೌಧ, ವಿಕಾಸಸದ ಚೇಂಬರ್ ಗಳಲ್ಲಿ ಆಂಟಿಗಳು ಇರುತ್ತಿದ್ದರು ಎಂದು ಆರೋಪಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular