ಆಂಧ್ರ ಪ್ರದೇಶ : ಮದ್ಯ ಸೇವಿಸಿ ಚುಂಬಿಸಲು ಯತ್ನಿಸಿದ ಪತಿಯ ನಾಲಿಗೆಯನ್ನು ಮಹಿಳೆಯೊಬ್ಬಳು ಕಚ್ಚಿ ಕತ್ತರಿಸಿದ ಘಟನೆ ನಡೆದಿದೆ.
ಕರ್ನೂಲ್ ಜಿಲ್ಲೆಯ ಜೊನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ತುಗ್ಗಲಿ ಮಂಡಲದ ಯಲ್ಲಮ್ಮಗುಟ್ಟ ತಾಂಡಾದಲ್ಲಿ ಈ ಘಟನೆ ನಡೆದಿದೆ. ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಚಂದು ನಾಯ್ಕ್ ಎಂಬಾತ ತನ್ನ ಪತ್ನಿ ಪುಷ್ಪಾವತಿಗೆ ಮುತ್ತಿಡಲು ಪ್ರಯತ್ನಿಸಿದ್ದು, ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾಳೆ. ಗಂಡ ಬಲವಂತವಾಗಿ ಮುತ್ತಿಡಲು ಹೋದಾಗ ಪುಷ್ಪಾವತಿ ಅವನ ನಾಲಿಗೆಯನ್ನು ಕಚ್ಚಿದ್ದಾಳೆ ಎಂದು ಪೊಲೀಸರು ತಿಳಿಸಿದರು. ಗಂಭೀರವಾಗಿ ಗಾಯಗೊಂಡ ಪತಿಯನ್ನು ಚಿಕಿತ್ಸೆಗಾಗಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ದಂಪತಿಗಳು ಕಳೆದ ಎರಡು ವರ್ಷಗಳಲ್ಲಿ ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ತನ್ನ ಇಚ್ಛೆಗೆ ವಿರುದ್ಧವಾಗಿ ಹಲ್ಲೆ ನಡೆಸಿ ಚುಂಬಿಸುವಂತೆ ಒತ್ತಾಯಿಸಿದ್ದರಿಂದ ತಾನು ಹಾಗೆ ಮಾಡಿದ್ದೇನೆ ಎಂದು ಪುಷ್ಪಾವತಿ ಜೊನ್ನಗಿರಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರಿಗೆ ನೀಡಿದ ಲಿಖಿತ ದೂರಿನಲ್ಲಿ, ತನ್ನ ಹೆಂಡತಿ ತನ್ನನ್ನು ಕೊಲ್ಲುತ್ತಾಳೆ ಎಂಬ ಭಯವಿದೆ ಎಂದು ಅವರು ಉಲ್ಲೇಖಿಸಿದ್ದಾರೆ