Viral Photo | ʼಗೇಟ್‌ವೇ ಆಫ್ ಇಂಡಿಯಾʼದಲ್ಲಿ ಬಾಯ್‌ಫ್ರೆಂಡ್ ಎಡ್ ವೆಸ್ಟ್‌ವಿಕ್‌ಗೆ ಚುಂಬಿಸಿದ ನಟಿ ಆಮಿ ಜಾಕ್ಸನ್

ನಟಿ ಮತ್ತು ರೂಪದರ್ಶಿ ಆಮಿ ಜಾಕ್ಸನ್ ಮುಂಬೈನಲ್ಲಿ ಬಾಯ್ ಫ್ರೆಂಡ್, ನಟ ಎಡ್ ವೆಸ್ಟ್ವಿಕ್ ಅವರೊಂದಿಗೆ ಕಾಲ ಕಳೆಯುತ್ತಿದ್ದಾರೆ. ಇತ್ತೀಚೆಗೆ ಮುಂಬೈ ಮಹಾನಗರಿ ಸುತ್ತಾಡಿದ ಇಬ್ಬರೂ ಗೇಟ್‌ವೇ ಆಫ್ ಇಂಡಿಯಾದ ಮುಂದೆ ಚುಂಬಿಸಿದ್ದಾರೆ.

ಮುಂಬೈ ಸುತ್ತಾಡಿದ ಫೋಟೋವನ್ನು ನಟ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ಈ ಜೋಡಿ ಗೇಟ್‌ವೇ ಆಫ್ ಇಂಡಿಯಾದ ಮುಂದೆ ಪರಸ್ಪರ ಚುಂಬಿಸುತ್ತಿರುವ ಫೋಟೋ ಹಂಚಿಕೊಂಡಿದ್ದರೆ, ಮತ್ತೊಂದರಲ್ಲಿ ಇಬ್ಬರೂ ಸೆಲ್ಫಿಗೆ ಫೋಸ್ ನೀಡಿದ್ದಾರೆ. ಇದನ್ನು ಎಡ್ ವೆಸ್ಟ್‌ವಿಕ್ ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಎಡ್ ಅವರ ಪೋಸ್ಟ್‌ಗೆ ಹಲವಾರು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಬಳಕೆದಾರರಲ್ಲಿ ಒಬ್ಬರು, ಇಲ್ಲಿಯವರೆಗೆ ನೀವು ಭಾರತದಲ್ಲಿ ಯಾವುದು ಹೆಚ್ಚು ಇಷ್ಟಪಟ್ಟಿದ್ದೀರಿ ಎಂದು ಕೇಳಿದ್ದಾರೆ. ಇದಕ್ಕೆ ಎಡ್, ನನಗೆ ಸ್ಟ್ರೀಟ್ ಫುಡ್ ತುಂಬಾ ಇಷ್ಟವಾಯಿತು ಎಂದಿದ್ದಾರೆ.

ಎಡ್ ಮತ್ತು ಆಮಿ ಜಾಕ್ಸನ್ ಜೂನ್ 2022 ರಲ್ಲಿ ತಮ್ಮಿಬ್ಬರ ನಡುವಿನ ಸಂಬಂಧವನ್ನು ದೃಢಪಡಿಸಿದರು. ನಟಿ ಈ ಹಿಂದೆ ಜಾರ್ಜ್ ಪನಾಯೊಟೌ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 2019 ರ ಸೆಪ್ಟೆಂಬರ್‌ನಲ್ಲಿ ಪುತ್ರ ಆಂಡ್ರಿಯಾಸ್‌ಗೆ ಜನ್ಮ ನೀಡಿದ್ರು. 2021 ರಲ್ಲಿ ಈ ಜೋಡಿ ಬೇರ್ಪಟ್ಟರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read