HomeKarnatakaBIG NEWS: ಸ್ಪೀಕರ್ ಕಾಂಗ್ರೆಸ್ ಆಫೀಸಿಗೆ ಊಟಕ್ಕೆ ಹೋಗಿದ್ದು ಯಾಕೆ ? ಸಭಾಧ್ಯಕ್ಷರ ಮಾನ ಮರ್ಯಾದೆ...

BIG NEWS: ಸ್ಪೀಕರ್ ಕಾಂಗ್ರೆಸ್ ಆಫೀಸಿಗೆ ಊಟಕ್ಕೆ ಹೋಗಿದ್ದು ಯಾಕೆ ? ಸಭಾಧ್ಯಕ್ಷರ ಮಾನ ಮರ್ಯಾದೆ ತೆಗೆದ ಖಾದರ್; ಆರ್. ಅಶೋಕ್ ಆಕ್ರೋಶ

ಬೆಂಗಳೂರು; ಪ್ರಜಾಪ್ರಭುತ್ವ ಉಳಿಸಲು ನಾವು ಪ್ರತಿಭಟನೆಯನ್ನು ಮಾಡುತ್ತಿದ್ದೇವೆ. ಸ್ಪೀಕರ್ ಸಭಾಧ್ಯಕ್ಷರ ಮಾನ ಮರ್ಯಾದೆ ತೆಗೆಯುತ್ತಿದ್ದಾರೆ ಎಂದು ಮಾಜಿ ಸಚಿವ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಸ್ಪೀಕರ್ ಖಾದರ್ ಒನ್ ಸೈಡ್ ಇದ್ದಾರೆ. ಆಡಳಿತ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಸ್ಪೀಕರ್ ಗೆ ನೀವು ಯಾಕೆ ಕಾಂಗ್ರೆಸ್ ಕಚೇರಿಗೆ ಊಟಕ್ಕೆ ಹೋಗಿದ್ದೀರಿ ಎಂದು ಪ್ರಶ್ನೆ ಮಾಡಿದೆವು. ಅದಕ್ಕೆ ಅವರು ನಮ್ಮನ್ನು ಸದನದಿಂದ ಹೊರಹಾಕಿದ್ದಾರೆ. ನೀವು ಅಲ್ಲಿ ಬಿರಿಯಾನಿ ತಿಂದ್ರಾ? ಅಂತ ನಾವು ಕೇಳಿಲ್ಲ. ಸ್ಪೀಕರ್ ಆಗಿ ಒಂದು ಪಕ್ಷದ ಭೋಜನ ಕೂಟಕ್ಕೆ ಹೋಗಿದ್ದನ್ನು ಪ್ರಶ್ನಿಸಿದ್ದೇವೆ ಎಂದು ಕಿಡಿಕಾರಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ಪೀಕರ್ ಖಾದರ್ ಹೋಟೆಲ್ ಮುಂದೆ ಕೈಕಟ್ಟಿ ನಿಂತಿದ್ದರು. ಸಭಾಧ್ಯಕ್ಷರ ಮಾನ ಮರ್ಯಾದೆಯನ್ನು ಖಾದರ್ ತೆಗೆದಿದ್ದಾರೆ. ಅವರಿಗೆ ಧಿಕ್ಕಾರ ಎಂದು ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

For Latest News Updates, Join Our Whatsapp Community🚩
RELATED ARTICLES

Most Popular