ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 14 ನೇ ಕಂತನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 27, 2023 ರಂದು 8.5 ಕೋಟಿಗೂ ಹೆಚ್ಚು ರೈತರಿಗೆ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಹೌದು, ಪಿಎಂ ಕಿಸಾನ್ 14ನೇ ಕಂತಿನ ಹಣವನ್ನು ಅನ್ನದಾತರ ಬ್ಯಾಂಕ್ ಖಾತೆಗೆ ಜುಲೈ 28ರಂದು ಜಮಾ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಇತ್ತೀಚೆಗೆ ಈ ವಿಷಯವನ್ನು ಬಹಿರಂಗಪಡಿಸಿದೆ
ಈ ಯೋಜನೆಯು ಭೂ ಹಿಡುವಳಿದಾರ ರೈತ ಕುಟುಂಬಗಳಿಗೆ ವರ್ಷಕ್ಕೆ 6,000 ರೂ.ಗಳ ಆರ್ಥಿಕ ಪ್ರಯೋಜನವನ್ನು ನೀಡುತ್ತದೆ, ಇದನ್ನು ತಲಾ 2,000 ರೂ.ಗಳ ಮೂರು ಸಮಾನ ಕಂತುಗಳಲ್ಲಿ ಪಾವತಿಸಲಾಗುತ್ತದೆ.
ಪಿಎಂ-ಕಿಸಾನ್ ಯೋಜನೆಯು ಆರಂಭದಲ್ಲಿ 2 ಹೆಕ್ಟೇರ್ ವರೆಗೆ ಭೂಮಿಯನ್ನು ಹೊಂದಿರುವ ಸಣ್ಣ ಮತ್ತು ಅತಿಸಣ್ಣ ರೈತರಿಗೆ (ಎಸ್ಎಂಎಫ್) ಮೀಸಲಾಗಿತ್ತು ಆದರೆ ಯೋಜನೆಯ ವ್ಯಾಪ್ತಿಯನ್ನು ಜೂನ್ 01, 2019 ರಿಂದ ಎಲ್ಲಾ ಭೂ ಹಿಡುವಳಿ ರೈತರಿಗೆ ವಿಸ್ತರಿಸಲಾಯಿತು.ಪಿಎಂ-ಕಿಸಾನ್ ಯೋಜನೆಯ 13 ನೇ ಕಂತನ್ನು ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿಯಲ್ಲಿ ಬಿಡುಗಡೆ ಮಾಡಿದರು.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಸ್ಥಿತಿ ಪರಿಶೀಲನೆ ಹಂತಗಳು
ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ- pmkisan.gov.in
ಮುಖಪುಟದಲ್ಲಿರುವ ‘ಫಾರ್ಮರ್ಸ್ ಕಾರ್ನರ್'( Farmers Corner) ವಿಭಾಗದ ಮೇಲೆ ಕ್ಲಿಕ್ ಮಾಡಿ
‘ಫಲಾನುಭವಿ ಸ್ಥಿತಿ’ (Beneficiary Status’) ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ನೋಂದಾಯಿತ ಆಧಾರ್ ಸಂಖ್ಯೆ ಅಥವಾ ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸಿ.
Get Data’ ಮೇಲೆ ಕ್ಲಿಕ್ ಮಾಡಿ