ದಿನವಿಡೀ ದುಡಿದು ದಣಿದವರಿಗೆ ಮತ್ತೆ ಅಡುಗೆ ಮನೆ ಹೊಕ್ಕು ಆಹಾರ ಬೇಯಿಸುವ ತಾಳ್ಮೆ ಬಹಳ ಕಡಿಮೆ. ಏನೋ ಒಂದು ತಿಂದು ಮಲಗಿದರಾಯ್ತು. ಆರ್ಡರ್ ಮಾಡಿ ತರಿಸಿದರೆ ಆಯ್ತು ಎಂದು ರೆಡಿ ಟು ಈಟ್ ಅಂದ್ರೆ ತಿನ್ನಲು ಸಿದ್ದವಾಗಿರುವ ಆಹಾರ ಪದಾರ್ಥಕ್ಕೆ ಹೆಚ್ಚು ಹವಣಿಸುತ್ತಾರೆ. ಆದರೆ ಎಚ್ಚರ! ಈ ಪ್ರೋಜನ್ ಫುಡ್ ಅಂದರೆ ಘನೀಕರಿಸಿದ ಆಹಾರ ವಿಷವೇ ಸರಿ.
ಫ್ರೋಜನ್ ಫುಡ್ ಎಂದರೆ ಹೆಚ್ಚು ಶ್ರಮವಿಲ್ಲದೆ, ತಯಾರಿಯ ಅವಶ್ಯಕತೆ ಇಲ್ಲದೆ ತಿನ್ನಲು ಸಿದ್ಧವಿರುವ ಆಹಾರ. ತರಕಾರಿ, ಹಣ್ಣು, ಮಾಂಸ ಹೀಗೆ ಹಲವಾರು ಆಹಾರ ಪದಾರ್ಥಗಳನ್ನು ಘನೀಕರಿಸಿ, ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಫ್ರಿಡ್ಜ್ ನಲ್ಲಿ ಇಟ್ಟ ಆಹಾರ ದೇಹಕ್ಕೆ ಸುತರಾಂ ಒಳ್ಳೆಯದಲ್ಲ.
ಇಂತಹ ಆಹಾರ ಪದಾರ್ಥಗಳಲ್ಲಿ ಅತ್ಯಧಿಕ ಸೋಡಿಯಂ ಇರುತ್ತದೆ. ಸೋಡಿಯಂ ಹೆಚ್ಚಿರುವ ಆಹಾರ ಸೇವನೆಯಿಂದ ಅಧಿಕ ರಕ್ತದೊತ್ತಡ, ಹೃದಯದ ಸಮಸ್ಯೆ, ಪಾರ್ಶ್ವವಾಯು ಉಂಟಾಗಬಹುದು.
ಫ್ರೋಜನ್ ಫುಡ್ ನ ಮೊರೆ ಹೋಗುವ ಜನ ಇದರ ಬದಲಾಗಿ ಮನೆಯಲ್ಲಿ ಸುಲಭವಾಗಿ, ಸರಳವಾಗಿ ಬೇಗನೆ ತಯಾರಾಗುವ ಕೆಲವು ಅಡುಗೆಗಳನ್ನು ಕಲಿತು ತಾಜಾ ಇರುವಾಗಲೇ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು.