ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಆಡಳಿತ ಪಕ್ಷ ಹಾಗೂ ಪ್ರತಿ ಪಕ್ಷಗಳು ಈಗಿನಿಂದಲೇ ಭರ್ಜರಿ ತಯಾರಿ ನಡೆಸುತ್ತಿವೆ. ಬಿಜೆಪಿ ನೇತೃತ್ವದ NDA ಮೈತ್ರಿಕೂಟ 38 ಪಕ್ಷಗಳೊಂದಿಗೆ ಮೈತ್ರಿ ಹೊಂದಿದ್ದರೆ, ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಸಭೆ ಸೇರಿದ್ದ 25 ವಿಪಕ್ಷಗಳು INDIA ಹೆಸರಿನಲ್ಲಿ ಮೈತ್ರಿಕೂಟ ರಚಿಸಿಕೊಂಡಿವೆ.
ಇದರ ಮಧ್ಯೆ ಲೋಕಸಭೆಯಲ್ಲಿ 91 ಸಂಸದರನ್ನು ಹೊಂದಿರುವ 11 ಪಕ್ಷಗಳು ಈ ಎರಡೂ ಕೂಟಗಳೊಂದಿಗೆ ಯಾವುದೇ ಮೈತ್ರಿ ಮಾಡಿಕೊಳ್ಳದೆ ತಟಸ್ಥ ನಿಲುವನ್ನು ಅನುಸರಿಸುತ್ತಿವೆ. ಈ ಪೈಕಿ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದ ಜೆಡಿಎಸ್ ಕೂಡ ಒಂದು. ತಟಸ್ಥವಾಗಿ ಉಳಿದಿರುವ 11 ಪಕ್ಷಗಳ ವಿವರ ಇಂತಿದೆ.
ಜೆಡಿಎಸ್
ವೈ.ಎಸ್.ಆರ್. ಕಾಂಗ್ರೆಸ್ ಪಕ್ಷ
ಬಿಜೆಡಿ
ಟಿ ಡಿ ಪಿ
ಬಿ ಆರ್ ಎಸ್
ಬಿ.ಎಸ್.ಪಿ.
ಎ ಐ ಎಂ ಐ ಎಂ
ಎಸ್.ಎ.ಡಿ.
ಎಸ್.ಎ.ಡಿ (ಮಾನ್)
ಎ ಐ ಯು ಡಿ ಎಫ್
ಆರ್ ಎಲ್ ಪಿ