ಮಂಗಳೂರು: ಮಂಗಳೂರಿನ ಸುರತ್ಕಲ್ ಬೀಚ್ ನಲ್ಲಿ ವಿಶೇಷವಾದ ಅಪರೂಪದ ಮೀನೊಂದು ಪತ್ತೆಯಾಗಿದ್ದು, ಕಪ್ಪು ಚುಕ್ಕೆಗಳಿಂದ ಆಕರ್ಷಣೀಯವಾಗಿದೆ.
‘ಸ್ಪಾಟೆಡ್ ಮೊರೈ ಈಲ್ಸ್’ ಎಂಬ ಹೆಸರಿನ ಅಪರೂಪದ ಮೀನು ಇದಾಗಿದ್ದು, ಮೀನು ನೋಡಲು ಜನಸಾಗರವೇ ಬೀಚ್ ಬಳಿ ಬಂದಿದೆ. ಇಂತಹ ಮೀನುಗಳು ಸಾಮಾನ್ಯವಾಗಿ ದ್ವೀಪದ ಬಳಿ ಹವಳದ ದಿಬ್ಬದಂತಹ ಸ್ಥಳಗಳಲ್ಲಿ ವಾಸ ಮಾಡುತ್ತವೆ.
ಕಡಲು ಪ್ರಕ್ಷುಬ್ಧಗೊಂಡ ಕಾರಣಕ್ಕೆ ಅಲೆಗಳ ಅಬ್ಬರಕ್ಕೆ ಸಮುದ್ರದ ತೀರಕ್ಕೆ ಬಂದು ಬಿದ್ದಿರುವ ಸಾಧ್ಯತೆ ಇದೆ. ಸಧ್ಯ ಪತ್ತೆಯಾಗಿರುವ ಈ ‘ಸ್ಪಾಟೆಡ್ ಮೊರೈ ಈಲ್ಸ್’ ಮೃತಪಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಮೀನನ್ನು ಸ್ಥಳೀಯವಾಗಿ ಆರೋಳಿ ಎಂದು ಕರೆಯುತ್ತಾರೆ. ಈ ಮೀನನ್ನು ಸ್ಥಳೀಯರು ತಿನ್ನುವುದಿಲ್ಲ ಎಂದು ಮೀನುಗಾರರು ಮಾಹಿತಿ ನೀಡಿದ್ದರಾರೆ.