alex Certify ಎತ್ತರದಿಂದ ಬಿದ್ದಂತೆ ಕನಸು ಬಿದ್ದಿದೆಯಾ….? ಇದರ ಅರ್ಥ ಬೇರೆಯೇ ಇದೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎತ್ತರದಿಂದ ಬಿದ್ದಂತೆ ಕನಸು ಬಿದ್ದಿದೆಯಾ….? ಇದರ ಅರ್ಥ ಬೇರೆಯೇ ಇದೆ….!

ರಾತ್ರಿ ಮಲಗಿದಾಗ ಎಲ್ಲರಿಗೂ ಕನಸುಗಳು ಬೀಳುವುದು ಸಾಮಾನ್ಯ. ಕೆಲವೊಮ್ಮೆ ಒಳ್ಳೆಯ ಕನಸು ಕಾಣುತ್ತೇವೆ, ಒಮ್ಮೊಮ್ಮೆ ಕೆಟ್ಟ ಕನಸುಗಳು ಕೂಡ ಬೀಳುತ್ತವೆ. ನೀವೂ ಕೂಡ ಎತ್ತರದಿಂದ ಬಿದ್ದಂತೆ ಕನಸು ಕಂಡಿರಬಹುದು. ಹಾಸಿಗೆ, ಪರ್ವತ, ಕಟ್ಟಡ ಇತ್ಯಾದಿಗಳಿಂದ ಬಿದ್ದಂತೆ ನಮಗೆ ಕನಸು ಬರುತ್ತವೆ. ಈ ಕನಸಿನ ಹಿಂದೆ ಹೆಚ್ಚಿನವರಿಗೆ ತಿಳಿದಿಲ್ಲದ ಸತ್ಯವಿದೆ.

ಇದು ಕೇವಲ ಕನಸು ಎಂದು ಹೆಚ್ಚಿನವರು ಭಾವಿಸುತ್ತಾರೆ. ಆದರೆ ಈ ಕನಸುಗಳು ನಮ್ಮ ಜೀವನದೊಂದಿಗೆ ಆಳವಾದ ಸಂಬಂಧವನ್ನು ಹೊಂದಿವೆ. ಬೀಳುವಿಕೆಗೆ ಸಂಬಂಧಿಸಿದ ಯಾವುದೇ ಕನಸು ಆತಂಕ ಮತ್ತು ತನ್ನ ಮೇಲೆ ನಿಯಂತ್ರಣವನ್ನು ಕಳೆದುಕೊಳ್ಳುವ ಭಾವನೆಗೆ ಸಂಬಂಧಿಸಿದೆ. ಇದು ನಿಮ್ಮ ವೃತ್ತಿ ಜೀವನಕ್ಕೆ ಸಂಬಂಧಿಸಿರಬಹುದು, ಸಂಬಂಧಕ್ಕೆ ಸಂಬಂಧಿಸಿರಬಹುದು ಅಥವಾ ಹಣಕಾಸಿನ ಪರಿಸ್ಥಿತಿಗೆ ಸಂಬಂಧಿಸಿರಬಹುದು.

ತಜ್ಞರ ಪ್ರಕಾರ ಕೆಳಗೆ ಬಿದ್ದಂತೆ ಕಾಣುವ ಕನಸು ಅಸಹಾಯಕತೆ ಅಥವಾ ಅಸಹಾಯಕತೆಯ ಭಾವನೆಗೆ ಸಂಬಂಧಿಸಿದ್ದು. ಭಯ, ಆತಂಕ ಮತ್ತು ಉದ್ವೇಗದ ಸಂಕೇತ.

ಬಂಡೆಯಿಂದ ಬಿದ್ದಂತೆ ಕನಸು – ಬಂಡೆಯಿಂದ ಕೆಳಕ್ಕೆ ಬಿದ್ದಂತೆ ಕನಸು ಕಂಡರೆ, ನೀವು ಯಾವುದನ್ನಾದರೂ ಆಳವಾಗಿ ಚಿಂತಿಸುತ್ತಿದ್ದೀರಿ ಎಂದರ್ಥ. ಯಾರೊಂದಿಗಾದರೂ ಸ್ನೇಹ ಅಥವಾ ಆಳವಾದ ಸಂಬಂಧವು ಮುರಿದುಹೋದಾಗ ಈ ರೀತಿಯ ಕನಸುಗಳು ಸಾಮಾನ್ಯವಾಗಿ ಬೀಳುತ್ತವೆ.

ಮುಗ್ಗರಿಸಿ ಬಿದ್ದಂತೆ ಕನಸು – ಕನಸಿನಲ್ಲಿ ಮುಗ್ಗರಿಸಿ ಬಿದ್ದಂತೆ ಭಾಸವಾದರೆ ಅದಕ್ಕೂ ಬೇರೆಯದ್ದೇ ಅರ್ಥವಿದೆ. ನಮಗೆ ಬಿಡಲು ಇಷ್ಟವಿಲ್ಲದ ಯಾವುದನ್ನಾದರೂ ಬಿಟ್ಟಾಗ ಈ ರೀತಿಯ ಕನಸುಗಳು ಕಾಡುತ್ತವೆ.

ಆಕಾಶದಿಂದ ಬಿದ್ದಂತೆ ಕನಸು- ಕನಸಿನಲ್ಲಿ ಆಕಾಶದಿಂದ ಬೀಳುವಿಕೆಯು ನಿಯಂತ್ರಣವನ್ನು ಕಳೆದುಕೊಳ್ಳುವ ಭಾವನೆಗೆ ಸಂಬಂಧಿಸಿದೆ. ನೀವು ಯಾವುದೋ ವಿಷಯದ ಬಗ್ಗೆ ತುಂಬಾ ಅಸಮಾಧಾನ ಹೊಂದಿದ್ದರೆ, ಮನಸ್ಸಿಗೆ ನೋವಾಗಿದ್ದರೆ ಇಂತಹ ಕನಸು ಬೀಳುತ್ತದೆ. ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ಅನುಭವಿಸುತ್ತಿರುವಾಗ ಈ ಕನಸು ನಿಮಗೆ ಬರಬಹುದು.

ಎಲಿವೇಟರ್‌ನಲ್ಲಿ ಬಿದ್ದಂತೆ ಕನಸು – ಜೀವನದಲ್ಲಿ ಹಠಾತ್ ಬದಲಾವಣೆಯಾದಾಗ ಮೇಲಿನಿಂದ ಬಿದ್ದಂತೆ ಕನಸುಗಳು ಕಾಡುತ್ತವೆ. ಆದರೆ ಇದು ಎಲ್ಲರಿಗೂ ಆಗಬೇಕೆಂದೇನಿಲ್ಲ. ಆತ್ಮಗೌರವವನ್ನು ಕಳೆದುಕೊಳ್ಳುವ ಅಥವಾ ಯಾವುದಾದರೊಂದು ನಿಯಂತ್ರಣವನ್ನು ಕಳೆದುಕೊಳ್ಳುವಂತಹ ಚಿಂತೆಗಳಿಂದ ಬಳಲುತ್ತಿರುವ ಕೆಲವರು ಅಂತಹ ಕನಸುಗಳನ್ನು ಕಾಣುತ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...