ಬಾಲಿವುಡ್ ನಟ-ನಟಿಯರು ತಮ್ಮ ಚಲನಚಿತ್ರಗಳಿಂದ ಮಾತ್ರವಲ್ಲದೆ ತಮ್ಮ ಬಹು ಉದ್ಯಮಗಳ ಮೂಲಕ ಹೆಚ್ಚಿನ ಆದಾಯವನ್ನು ಹೊಂದಿದ್ದಾರೆ. ಆದ್ದರಿಂದ ದೇಶದ ಅತಿ ಹೆಚ್ಚು ತೆರಿಗೆ ಪಾವತಿಸುವವರ ಸಾಲಿನಲ್ಲಿ ಇವರು ಸಹ ಇದ್ದಾರೆ. ಆದರೆ ದೇಶದಲ್ಲಿ ತೆರಿಗೆ ಪಾವತಿಸುವ ವಿಚಾರದಲ್ಲಿ ನಟಿಯೊಬ್ಬರು ಎಲ್ಲರ ಗಮನ ಸೆಳೆದಿದ್ದಾರೆ.
ಅವರು ಮತ್ಯಾರು ಅಲ್ಲ ದೀಪಿಕಾ ಪಡುಕೋಣೆ. ಪ್ರಸ್ತುತ ಬಾಲಿವುಡ್‌ನಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ನಟಿ ಎಂದು ದೀಪಿಕಾ ಪಡುಕೋಣೆ ಪರಿಗಣಿಸಲ್ಪಟ್ಟಿದ್ದಾರೆ. ಯಾಕಂದ್ರೆ ಅವರು 2016-2017 ರಲ್ಲಿ 10 ಕೋಟಿ ತೆರಿಗೆಯನ್ನು ಪಾವತಿಸಿದ್ದಾರೆ ಮತ್ತು ಅಂದಿನಿಂದ ಇಷ್ಟು ಮೊತ್ತದ ತೆರಿಗೆ ಪಾವತಿಸುತ್ತಿದ್ದಾರೆ ಎಂದು GQ ಇಂಡಿಯಾ ತಿಳಿಸಿದೆ.
ದೀಪಿಕಾ ಪಡುಕೋಣೆ ಹೊರತುಪಡಿಸಿ ಬೇರೆ ಯಾವ ನಟಿಯು 10 ಕೋಟಿ ತೆರಿಗೆ ಪಾವತಿಸುವ ಪಟ್ಟಿಯಲ್ಲಿಲ್ಲ. ಇನ್ನು ಈ ಪಟ್ಟಿಯಲ್ಲಿರುವ ಎರಡನೇ ಅತಿ ಹೆಚ್ಚು ತೆರಿಗೆ ಪಾವತಿಸುವ ನಟಿ ಆಲಿಯಾ ಭಟ್. ಆಲಿಯಾ ಅವರು ಪ್ರತಿ ವರ್ಷ ಸುಮಾರು 5-6 ಕೋಟಿ ತೆರಿಗೆ ಪಾವತಿಸುತ್ತಾರೆ.
ಬಾಲಿವುಡ್ ನಟಿ ಕತ್ರಿನಾ ಕೈಫ್ ಈ ಹಿಂದೆ ಬಾಲಿವುಡ್‌ನ ಅತಿ ಹೆಚ್ಚು ತೆರಿಗೆ ಪಾವತಿಸುವ ನಟಿಯಾಗಿದ್ದರು. 2013-2014ರಲ್ಲಿ 5 ಕೋಟಿ ರೂಪಾಯಿಗೂ ಹೆಚ್ಚು ತೆರಿಗೆ ಪಾವತಿಸಿದ್ದರು. ಸ್ಟಾಕ್‌ಗ್ರೋ ಪ್ರಕಾರ ದೀಪಿಕಾ ಪಡುಕೋಣೆ ಸುಮಾರು 500 ಕೋಟಿ ರೂಪಾಯಿ ನಿವ್ವಳ ಲಾಭವನ್ನು ಹೊಂದಿದ್ದಾರೆ. ವರ್ಷಕ್ಕೆ 40 ಕೋಟಿ ರೂಪಾಯಿಗಳನ್ನು ಗಳಿಸುತ್ತಾರೆ ಎಂದು ಹೇಳಲಾಗಿದೆ. 2018 ರಿಂದ ಇವರು ತನ್ನ ಚಲನಚಿತ್ರಗಳಿಗೆ ಶುಲ್ಕವನ್ನು ಹೆಚ್ಚಿಸಿದ್ದಾರೆ. ಅವರು ಪ್ರಸ್ತುತ ಚಲನಚಿತ್ರಗಳಿಗೆ ಸುಮಾರು 15-20 ಕೋಟಿ ರೂ. ಗಳನ್ನು ಮತ್ತು ಅನುಮೋದನೆಗಳಿಗೆ 8 ಕೋಟಿ ರೂ. ಪಡೆದುಕೊಳ್ಳುತ್ತಿದ್ದಾರೆ.
ಇನ್ನು ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಜೊತೆಗಿನ ದೀಪಿಕಾ ಅವರ ಇತ್ತೀಚಿನ ಚಿತ್ರ ಪಠಾನ್ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು ಮತ್ತು ವಿಶ್ವದಾದ್ಯಂತ 1030 ಕೋಟಿ ಗಳಿಸಿತು. ಈ ಮೂಲಕ ದೀಪಿಕಾ ಅವರ ನಿವ್ವಳ ಲಾಭ ಮತ್ತು ಆದಾಯವು ಅವರನ್ನು ಬಾಲಿವುಡ್‌ನಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ನಟಿಯನ್ನಾಗಿ ಮಾಡಿದೆ.
ನಟಿಯರ ಪಟ್ಟಿಯಲ್ಲಿ ದೀಪಿಕಾ ಪಡುಕೋಣೆ ಅಗ್ರಸ್ಥಾನದಲ್ಲಿದ್ದರೆ, ಬಾಲಿವುಡ್‌ನಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ನಟ ಅಕ್ಷಯ್ ಕುಮಾರ್ ಎಂದು ಬಹು ಮಾಧ್ಯಮ ವರದಿಗಳು ತಿಳಿಸಿವೆ. ವರದಿಗಳ ಪ್ರಕಾರ, ಅಕ್ಷಯ್ ಕುಮಾರ್ ಪ್ರತಿ ವರ್ಷ 25 ಕೋಟಿ ರೂಪಾಯಿಗೂ ಹೆಚ್ಚು ತೆರಿಗೆ ಪಾವತಿಸುತ್ತಾರೆ.