ಪಾನ್ ಕಾರ್ಡ್ ಬಳಕೆ ಮಾಡಿ ವಂಚನೆ ಮಾಡುತ್ತಿರುವ ಸಾಕಷ್ಟು ಪ್ರಕರಣಗಳು ದಿನದಿಂದ ದಿನಕ್ಕೆ ವರದಿ ಆಗುತ್ತಲೇ ಇದೆ. ಕೆಲವು ತಿಂಗಳ ಹಿಂದೆ ನಡೆದ ಘಟನೆಯೊಂದರಲ್ಲಿ ಸೈಬರ್ ವಂಚಕರು ಹಲವಾರು ಸೆಲೆಬ್ರಿಟಿಗಳ ಪಾನ್ ಕಾರ್ಡ್ ವಿವರಗಳನ್ನು ದುರುಪಯೋಗಪಡಿಸಿಕೊಂಡು ಕ್ರೆಡಿಟ್ ಕಾರ್ಡ್ಗಳನ್ನು ಪಡೆದಿದ್ದಾರೆ. ಪಾನ್ ಕಾರ್ಡ್ ಭಾರತದ ಆದಾಯ ತೆರಿಗೆ ಇಲಾಖೆಯಿಂದ ನೀಡುವ ಅತ್ಯಮೂಲ್ಯ ಗುರುತಿನ ದಾಖಲೆಯಾಗಿದೆ. ಭಾರತದಲ್ಲಿ ಆದಾಯ ತೆರಿಗೆ ಪಾವತಿ ಮಾಡುವವರು ಆಧಾರ್ ಕಾರ್ಡ್ ಲಿಂಕ್ ಮಾಡಲಾದ ಪಾನ್ ಕಾರ್ಡ್ ಹೊಂದುವುದು ಕಡ್ಡಾಯವಾಗಿದೆ.
ಪಾನ್ ಸಂಖ್ಯೆ ಎಂದರೇನು ?
ಪಾನ್ ಕಾರ್ಡ್ ಎಂಬದು 10 ಅಂಕಿಗಳ ಆಲ್ಫಾನ್ಯೂಮರಿಕ್ ಐಡೆಂಟಿಫೈಯಿಂಗ್ ಸಂಖ್ಯೆಯಾಗಿದ್ದು ಇದನ್ನು ಭಾರತೀಯ ತೆರಿಗೆ ಇಲಾಖೆ ನೀಡುತ್ತದೆ. ತೆರಿಗೆ ಉದ್ದೇಶಗಳಿಗಾಗಿ ಭಾರತದಲ್ಲಿನ ವ್ಯಕ್ತಿಗಳು ಈ ಕಾರ್ಡ್ನ್ನು ಬಳಕೆ ಮಾಡಬಹುದಾಗಿದೆ.
ಪಾನ್ ಕಾರ್ಡ್ ದುರ್ಬಳಕೆ ತಡೆಯುವುದು ಹೇಗೆ ?
ನಿಮ್ಮ ಪಾನ್ ಕಾರ್ಡ್ನ ಸಂಭಾವ್ಯ ದುರುಪಯೋಗ ಬಗ್ಗೆ ನಿಮಗೆ ಕಾಳಜಿ ಇದ್ದರೆ, ನಿಮ್ಮ ಪಾನ್ ಕಾರ್ಡ್ ದುರುಪಯೋಗವಾಗ್ತಿದೆ ಎಂಬ ಸಣ್ಣ ಅನುಮಾನ ಮೂಡಿದರೂ ಸಹ ನೀವು ಕೆಳಗಿನ ಈ ಹಂತಗಳನ್ನು ಪಾಲಿಸಬೇಕು.
ನಿಮ್ಮ ಬ್ಯಾಂಕ್ ಸ್ಟೇಟ್ಮೆಂಟ್ಗಳು, ಕ್ರೆಡಿಟ್ ಕಾರ್ಡ್ ಬಿಲ್ಗಳು ಇವುಗಳನ್ನು ಕಾಲ ಕಾಲಕ್ಕೆ ಪರಿಶೀಲನೆ ಮಾಡಬೇಕು. ಯಾವುದೇ ಅನುಮಾನಾಸ್ಪದ ಹಣಕಾಸಿನ ಚಟುವಟಿಕೆಗಳು ಗಮನಕ್ಕೆ ಬಂದರೂ ಕೂಡಲೇ ಬ್ಯಾಂಕ್ಗೆ ಕರೆ ಮಾಡಿ ಈ ಬಗ್ಗೆ ಮಾಹಿತಿ ಪಡೆಯಬೇಕು.
ಕ್ರೆಡಿಟ್ ಬ್ಯೂರೋದಿಂದ ನಿಮ್ಮ ಕ್ರೆಡಿಟ್ ವರದಿಯ ನಕಲು ಪ್ರತಿಯನ್ನು ಪಡೆದುಕೊಳ್ಳಬೇಕು. ಇಲ್ಲಿ ನಿಮ್ಮ ಪಾನ್ ಕಾರ್ಡ್ ಬಳಸಿ ಯಾವುದೇ ಅನಧಿಕೃತ ಕ್ರೆಡಿಟ್ ಕಾರ್ಡ್ ವ್ಯವಹಾರ ನಡೆದಿದೆಯೇ ಎಂಬುದನ್ನು ನೀವು ತಿಳಿದುಕೊಳ್ಳಬಹುದು. ಒಂದು ವೇಳೆ ನಿಮಗೆ ಅನಧಿಕೃತ ವ್ಯವಹಾರದ ಅನುಮಾನ ಬಂದಲ್ಲಿ ಕೂಡಲೇ ಕ್ರೆಡಿಟ್ ಬ್ಯುರೋಗೆ ವರದಿ ಮಾಡಿ.
ನಿಮ್ಮ ಆದಾಯ ತೆರಿಗೆ ಇಲಾಖೆಯ ಖಾತೆಯನ್ನು ಪರಿಶೀಲಿಸಿ:
ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನಿಮ್ಮ ಪ್ಯಾನ್ ಕಾರ್ಡ್ ವಿವರಗಳನ್ನು ಬಳಸಿಕೊಂಡು ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ. ನಿಮ್ಮ ತೆರಿಗೆ ಫೈಲಿಂಗ್‌ಗಳನ್ನು ಪರಿಶೀಲಿಸಿ ಮತ್ತು ಯಾವುದೇ ವ್ಯತ್ಯಾಸಗಳು ಅಥವಾ ಅನಧಿಕೃತ ಬದಲಾವಣೆಗಳಿಲ್ಲ ಎಂದು ಖಚಿತಪಡಿಸಿಕೊಳ್ಳಿ.