ಚೀನಾದಲ್ಲಿ ಶಿಶುವಿಹಾರದಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕಿಯೊಬ್ಬಳು ತನ್ನ ಸಹೋದ್ಯೋಗಿ ಜೊತೆಯಲ್ಲಿ ಜಗಳವಾಡಿದ್ದು ಈ ವಿಚಾರವಾಗಿ ಸೇಡು ತೀರಿಸಿಕೊಳ್ಳಲು ಬರೋಬ್ಬರಿ 25 ಮಕ್ಕಳಿಗೆ ವಿಷವುಣಿಸಿದ್ದಾಳೆ. ಅಲ್ಲದೇ ಒಬ್ಬರನ್ನು ಈಕೆ ಹತ್ಯೆಗೈದಿದ್ದಾಳೆ ಎನ್ನಲಾಗಿದೆ.
ನಾಲ್ಕು ವರ್ಷಗಳ ಹಿಂದೆ ಜಿಯಾಝುವೊದಲ್ಲಿನ ಮೆಂಗ್ಮೆಂಗ್ ಪ್ರೀ ಸ್ಕೂಲ್ ಶಿಕ್ಷಣದ ಯುವ ವಿದ್ಯಾರ್ಥಿಗಳಿಗೆ ವಿಷ ನೀಡಿದ ಆರೋಪದ ಅಡಿಯಲ್ಲಿ ಬಂಧನಕ್ಕೆ ಒಳಗಾಗಿದ್ದ 39 ವರ್ಷದ ವಾಂಗ್ಯುನ್ ಎಂಬಾಕೆಗೆ ಮರಣದಂಡನೆ ವಿಧಿಸಲಾಗಿದೆ.
“ಸಹೋದ್ಯೋಗಿಯೊಂದಿಗೆ ಜಗಳವಾಡಿದ ನಂತರ ಸೇಡು ತೀರಿಸಿಕೊಳ್ಳಲು” ವಾಂಗ್ ತನ್ನ ಸಹೋದ್ಯೋಗಿಯ ವಿದ್ಯಾರ್ಥಿಗಳ ಉಪಹಾರವನ್ನು ಸೋಡಿಯಂ ನೈಟ್ರೈಟ್‌ನೊಂದಿಗೆ ಕಲಬೆರಕೆ ಮಾಡಿದ್ದಾಳೆ ಎಂದು ಸ್ಥಳೀಯ ಅಧಿಕಾರಿಗಳು ಆ ಸಮಯದಲ್ಲಿ ತಿಳಿಸಿದ್ದಾರೆ.
ಶಿಕ್ಷಕಿಯು ತನ್ನ ಮರಣದಂಡನೆ ಶಿಕ್ಷೆಯನ್ನು ಮರುಪರಿಶೀಲನೆ ಮಾಡುವಂತೆ ಮೇಲ್ಮನವಿ ಸಲ್ಲಿಸಿದ್ದರು. ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ಹೆನಾನ್ ಪ್ರಾಂತ್ಯದ ಜಿಯಾಜುವೋ ನಗರದ ನ್ಯಾಯಾಲಯವು ಮರಣದಂಡನೆ ಶಿಕ್ಷೆಯನ್ನು ನೀಡಿತ್ತು. ಆಕೆಯನ್ನು ಗಲ್ಲಿಗೇರಿಸಲಾಗಿದೆ ಎಂದು ವರದಿಯಾಗಿದೆ.