alex Certify ಇವರೇ ನೋಡಿ ವಿಶ್ವದ ಅತೀ ದುಬಾರಿ ಖಾಸಗಿ ಜೆಟ್​ ಮಾಲೀಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇವರೇ ನೋಡಿ ವಿಶ್ವದ ಅತೀ ದುಬಾರಿ ಖಾಸಗಿ ಜೆಟ್​ ಮಾಲೀಕ…!

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳು, ಸ್ಟಾರ್​ ಸೆಲೆವ್ರಿಟಿಗಳು, ಉದ್ಯಮಿಗಳು ತಮ್ಮದೇ ಆದ ಖಾಸಗಿ ವಿಮಾನವನ್ನುಹೊಂದಿದ್ದಾರೆ ಎಂಬುದರ ಬಗ್ಗೆ ಕೇಳಿರುತ್ತೀರಿ. ಮುಕೇಶ್​ ಅಂಬಾನಿ, ಗೌತಮ್​ ಅದಾನಿ, ಬಿಲ್​ಗೇಟ್ಸ್​, ಎಲಾನ್​ ಮಸ್ಕ್​​​​ನಂತಹ ಸಾಕಷ್ಟು ಕೋಟ್ಯಾಧಿಪತಿಗಳು ಖಾಸಗಿ ಜೆಟ್​ ಹೊಂದಿದ್ದಾರೆ. ಆದರೆ ಇವರ್ಯಾರ ಬಳಿಯೂ ಇರದ ವಿಶ್ವದ ಅತ್ಯಂತ ದುಬಾರಿ ಖಾಸಗಿ ಜೆಟ್ ಹೊಂದಿರುವ ವ್ಯಕ್ತಿ ಯಾರು ಗೊತ್ತೇ..?

ಅತ್ಯಂತ ದುಬಾರಿ ಖಾಸಗಿ ಜೆಟ್ ಅನ್ನು ರಷ್ಯಾದ ಉದ್ಯಮಿ ಅಲಿಶರ್ ಬುರ್ಖಾನೋವಿಚ್ ಉಸ್ಮಾನೋವ್ ಎಂಬವರು ಹೊಂದಿದ್ದಾರೆ. ಇದರ ಬೆಲೆ ಅಂದಾಜು 19.5 ಬಿಲಿಯನ್​ ಡಾಲರ್​ ಆಗಿದೆ. ಅಲಿಶರ್ ಉಸ್ಮಾನೋವ್ ಅವರು ಐಷಾರಾಮಿ ಏರ್‌ಬಸ್ A340-300 ಅನ್ನು ಹೊಂದಿದ್ದಾರೆ. ವಿಮಾನವು ಕಾರ್ಖಾನೆಯಿಂದ 250 ಮಿಲಿಯನ್ ಡಾಲರ್​ ವೆಚ್ಚವಾಗುತ್ತದೆ, ಆದರೆ ಅಲಿಶರ್ ಉಮನೋವ್ ಕಸ್ಟಮ್ ಖಾಸಗಿ ಜೆಟ್ ಇದಾಗಿದ್ದು, ಬರೋಬ್ಬರಿ 400 ಮಿಲಿಯನ್ ಡಾಲರ್​​ ಅಂದರೆ ರೂ.3,286 ಕೋಟಿ ಮೌಲ್ಯದ್ದಾಗಿದೆ ಎಂದು ವರದಿಯಾಗಿದೆ. ಸದ್ಯಕ್ಕಿರುವ ಮಾಹಿತಿಯ ಪ್ರಕಾರ ಇದು ಯುರೋಪ್‌ ಖಂಡದ ಅತಿ ದೊಡ್ಡ ಖಾಸಗಿ ಜೆಟ್ ಆಗಿದೆ.

ಅಲಿಶರ್​ ಉಸ್ಮಾನೋವ್ ರಷ್ಯಾದ ಕೈಗಾರಿಕಾ ಸಂಘಟಿತವಾದ ಮೆಟಾಲೊಯಿನ್‌ವೆಸ್ಟ್‌ನ ಬಹುಪಾಲು ಷೇರುದಾರರಾಗಿದ್ದಾರೆ ಮತ್ತು ಕೊಮ್ಮರ್ಸೆಂಟ್ ಪಬ್ಲಿಷಿಂಗ್ ಹೌಸ್ ಅನ್ನು ಹೊಂದಿದ್ದಾರೆ. ಅಲಿಶರ್​ ರಷ್ಯಾದ ಎರಡನೇ ಅತಿದೊಡ್ಡ ಮೊಬೈಲ್ ಟೆಲಿಫೋನ್ ಆಪರೇಟರ್ ಮೆಗಾಫೋನ್‌ನ ಸಹ-ಮಾಲೀಕರಾಗಿದ್ದಾರೆ ಮತ್ತು ವಿಶ್ವದ ಅತಿದೊಡ್ಡ ತಾಮ್ರದ ನಿಕ್ಷೇಪಗಳಲ್ಲಿ ಒಂದನ್ನು ಅಭಿವೃದ್ಧಿಪಡಿಸುವ ಉಡೋಕನ್ ತಾಮ್ರದ ಮಾಲೀಕರಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...