ಅನ್ನಂ ಪರಬ್ರಹ್ಮ ಸ್ವರೂಪಂ ಎಂದು ಕರೆಯಲಾಗುತ್ತದೆ. ಅನ್ನ ದೇಹದ ಶಕ್ತಿಯ ಮೂಲ. ಅನ್ನ ತಿನ್ನದೇ ಒಂದು ದಿನವೂ ಇರಲಾಗದು ಎಂದು ಹೇಳುವ ಅನೇಕರಿದ್ದಾರೆ.
ಅನ್ನ ಅಷ್ಟೇ ಅಲ್ಲ, ಅಕ್ಕಿ ತೊಳೆದ ನೀರು ಅನ್ನದಷ್ಟೆ ಶ್ರೇಷ್ಠ. ಇದರ ಉಪಯೋಗ ತಿಳಿದ ಮೇಲೆ ನೀವು ಇದನ್ನು ಚೆಲ್ಲುವ ಮನಸ್ಸು ಮಾಡುವುದಿಲ್ಲ.
ದೇಹದ ಅಧಿಕ ಉಷ್ಣಾಂಶವನ್ನು ಅಕ್ಕಿ ತೊಳೆದ ನೀರು ತೊಡೆದು ಹಾಕುತ್ತದೆ.
ಅಕ್ಕಿ ತೊಳೆದ ನೀರಿಗೆ ಸ್ವಲ್ಪ ಉಪ್ಪು, ಕಾಳುಮೆಣಸಿನ ಪುಡಿ ಹಾಕಿ ಕುಡಿದರೆ ಉತ್ತಮ ಪಾನಿಯವಾಗುತ್ತದೆ. ಇದು ದೇಹದ ನಿರ್ಜಲೀಕರಣ ತಪ್ಪಿಸುತ್ತದೆ.
ಅಕ್ಕಿ ತೊಳೆದ ನೀರು ಸಸಿಗಳಿಗೂ ಒಳ್ಳೆಯದೇ. ನಿಮ್ಮ ಮನೆಯ ಕುಂಡಗಳಲ್ಲಿ ಬೆಳೆಸಿರುವ ಸಸಿಗಳಿಗೆ ಅಕ್ಕಿ ತೊಳೆದ ನೀರು ಪ್ರತಿನಿತ್ಯ ಹಾಕುತ್ತಾ ಬಂದರೆ ಗಿಡಗಳು ಸೊಂಪಾಗಿ ಬೆಳೆಯುತ್ತದೆ.