3 ಚಿನ್ನದ ಪದಕ ಮುಡಿಗೇರಿಸಿಕೊಂಡ ಬಿಲ್ ಕಲೆಕ್ಟರ್ ಪುತ್ರಿ

ಬಳ್ಳಾರಿ: ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಪುತ್ರಿಯೊಬ್ಬರು ಔದ್ಯೋಗಿಕ ರಸಾಯನ ಶಾಸ್ತ್ರ ಪದವಿಯಲ್ಲಿ 3 ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವದಲ್ಲಿ ಬಳ್ಳಾರಿಯ ಎಮ್ಮಿಗನೂರು ಗ್ರಾಮ ಪಂಚಾಯತ್ ಬಿಲ್ ಕಲೆಕ್ಟರ್ ಪುತ್ರಿ ಹಜಿರಾಬಿ 3 ಚಿನ್ನದ ಪದಕ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.

ಬಿಲ್ ಕಲೆಕ್ಟರ್ ಸಾಯಿಬಣ್ಣ ಹಾಗೂ ರಜಿಯಾ ಬೇಗಂ ಅವರ ಮಗಳು ಹಜಿರಾಬಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸ್ವಗ್ರಾಮ ಎಮ್ಮಿಗನೂರಿನಲ್ಲಿ ಹಾಗೂ ಪದವಿಯನ್ನು ಬಳ್ಳಾರಿಯಲ್ಲಿ ಪೂರ್ಣಗೊಳಿಸಿದ್ದಾರೆ. ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವದಲ್ಲಿ ಮೂರು ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದಾರೆ.

ಮೂರು ಚಿನ್ನದ ಪದಕ ಪಡೆದು ಖುಷಿ ಹಂಚಿಕೊಂಡಿರುವ ಹಜಿರಾಬಿ, ನನಗೆ ಮೂರು ಚಿನ್ನದ ಪದಕ ಬರುತ್ತದೆ ಎಂಬ ನಿರೀಕ್ಷೆ ಇರಲಿಲ್ಲ. ಒಂದೆಡೆ ಚಿನ್ನದ ಪದಕ ಗೆದ್ದ ಖುಷಿ. ಇನ್ನೊಂದು ಕಡೆ ಅಪ್ಪ-ಅಮ್ಮನ ಆಸೆ ಈಡೇರಿಸಿದ ಸಂತೋಷ. ತಂದೆ-ತಾಯಿ ಸಹಕಾರದಿಂದ ಓದಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read