alex Certify ಕೇವಲ 22ನೇ ವಯಸ್ಸಿಗೆ ಐಪಿಎಸ್ ಅಧಿಕಾರಿಯಾದ ಯುವತಿ; ಇಲ್ಲಿದೆ ಸ್ಫೂರ್ತಿದಾಯಕ ಜರ್ನಿಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ 22ನೇ ವಯಸ್ಸಿಗೆ ಐಪಿಎಸ್ ಅಧಿಕಾರಿಯಾದ ಯುವತಿ; ಇಲ್ಲಿದೆ ಸ್ಫೂರ್ತಿದಾಯಕ ಜರ್ನಿಯ ಮಾಹಿತಿ

ಕೇವಲ 22 ನೇ ವಯಸ್ಸಿನಲ್ಲೇ UPSC ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಉತ್ತರ ಪ್ರದೇಶ ಮೂಲದ ಪೂಜಾ ಅವಾನಾ ಗಮನಾರ್ಹ ಸಾಧನೆ ಮಾಡಿದ್ದಾರೆ. ಪ್ರಸ್ತುತ ರಾಜಸ್ಥಾನ ಪೊಲೀಸ್‌ ಇಲಾಖೆಯಲ್ಲಿ ಪೊಲೀಸ್ ಉಪ ಆಯುಕ್ತರಾಗಿ (DCP) ಸೇವೆ ಸಲ್ಲಿಸುತ್ತಿರುವ ಪೂಜಾ ಅವರ ಕಥೆ ನಾಗರಿಕ ಸೇವೆಗೆ ಇಳಿಯಲು ಬಯಸುವವರಿಗೆ ಸ್ಫೂರ್ತಿ ನೀಡುವಂಥದ್ದು.

ತನ್ನ ಮಗಳನ್ನ ಪೊಲೀಸ್ ಸಮವಸ್ತ್ರದಲ್ಲಿ ನೋಡಬೇಕೆಂಬುದು ಪೂಜಾ ಅವರ ತಂದೆಯ ಕನಸಾಗಿತ್ತು. ಅದಕ್ಕಾಗಿ ಹಲವಾರು ಅಡೆತಡೆಗಳನ್ನು ದಾಟಿ, ತನ್ನ ತಂದೆಯ ಕನಸನ್ನು ನನಸಾಗಿಸಲು ನಿರ್ಧರಿಸಿದರು.

ಉತ್ತರಪ್ರದೇಶದ ನೋಯ್ಡಾದ ಅಟ್ಟಾ ಗ್ರಾಮದವರಾದ ಪೂಜಾ ಅವಾನಾ ಅವರು ತನ್ನ ಪದವಿಯನ್ನು ಪೂರ್ಣಗೊಳಿಸಿದ ನಂತರ UPSC ತಯಾರಿಗೆ ಮುಂದಾದರು. 2010 ರಲ್ಲಿ ಅವರು ಮೊದಲ ಬಾರಿಗೆ UPSC ಪರೀಕ್ಷೆಗೆ ಹಾಜರಾಗಿದ್ದರು ಆದರೆ ಅದರಲ್ಲಿ ಯಶಸ್ಸು ಗಳಿಸಲಿಲ್ಲ. ಆದಾಗ್ಯೂ ಈ ಸೋಲಿನಿಂದ ಧೃತಿಗೆಡದ ಅವರು ಎರಡನೇ ಪ್ರಯತ್ನದಲ್ಲಿ ಯಶಸ್ಸು ಕಂಡರು. 316ನೇ ರ್ಯಾಂಕ್ ಪಡೆಯುವ ಮೂಲಕ 22 ನೇ ವಯಸ್ಸಿನಲ್ಲಿಯೇ IPS ಅಧಿಕಾರಿಯಾದರು.

ತರಬೇತಿಯ ನಂತರ ಪೂಜಾ ಅವಾನಾ ಅವರಿಗೆ ರಾಜಸ್ಥಾನದ ಪುಷ್ಕರ್‌ನಲ್ಲಿ ಮೊದಲ ಪೋಸ್ಟಿಂಗ್ ಗೆ ನಿಯೋಜಿಸಲಾಯಿತು. ಜೈಪುರದಲ್ಲಿ ಸಂಚಾರ ಉಪ ಕಮಿಷನರ್ ಹುದ್ದೆ ಸೇರಿದಂತೆ ವಿವಿಧ ಹುದ್ದೆ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸಿದರು. ಪ್ರಸ್ತುತ ಅವರು ರಾಜಸ್ಥಾನ ಪೊಲೀಸ್‌ನಲ್ಲಿ ಡಿಸಿಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ವೈಫಲ್ಯಗಳು, ಕಡಿಮೆ ಅಂಕ ಅಥವಾ ಆರಂಭಿಕ ಹಿನ್ನಡೆಗಳಿಂದ ಭರವಸೆಯನ್ನು ಕಳೆದುಕೊಳ್ಳಬೇಡಿ ಎಂದು ಪೂಜಾ ಸ್ಫೂರ್ತಿಯ ಮಾತುಗಳನ್ನಾಡುತ್ತಾರೆ. ಆರಂಭದಲ್ಲಿ ಯಶಸ್ಸನ್ನು ತಪ್ಪಿದರೂ ಸತತ ಪ್ರಯತ್ನದಿಂದ ಅಂತಿಮವಾಗಿ ವಿಜಯವು ಸಿಗುತ್ತದೆ ಎಂಬುದು ಅವರ ಮಾತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...