ನವದೆಹಲಿ: ಏಷ್ಯಾಕಪ್ ವೇಳಾಪಟ್ಟಿಯ ಬಗ್ಗೆ ಎದ್ದಿರುವ ಗೊಂದಲಗಳ ನಡುವೆ ಪ್ರತಿಕ್ರಿಯಿಸಿರುವ ಐಪಿಎಲ್ ಅಧ್ಯಕ್ಷ ಅರುಣ್ ಧಮಾಲ್, ಈ ಬಾರಿ ಏಷ್ಯಾಕಪ್ ನಲ್ಲಿ ಟೀಂ ಇಂಡಿಯಾ ಶ್ರೀಲಂಕಾ ನೆಲದಲ್ಲಿ ಪಾಕಿಸ್ತಾನ ತಂಡ ಎದುರಿಸುವುದು ಖಚಿತ ಎಂದು ಸ್ಪಷ್ಟನೆ ನೀಡಿದ್ದಾರೆ.
ಏಷ್ಯಾ ಕಪ್ ಆಡಲು ಭಾರತ, ಪಾಕಿಸ್ತಾನ ನೆಲಕ್ಕೆ ಬಾರದಿದ್ದರೆ ಪಾಕ್ ತಂಡ ಕೂಡ ವಿಶ್ವಕಪ್ ಆಡಲು ಭಾರತಕ್ಕೆ ಬರುವುದಿಲ್ಲ ಎಂದು ಹೇಳುವ ಮೂಲಕ ಪಾಕಿಸ್ತಾನ ಕ್ರೀಡಾ ಸಚಿವ ಹೊಸ ವಿವಾದ ಸೃಷ್ಟಿಸಿದ್ದರು. ಇದರ ಬೆನ್ನಲ್ಲೇ ಏಷ್ಯಾಕಪ್ ವೇಳಾ ಪಟ್ಟಿ ಪ್ರಕಟಣೆ ಕೂಡ ವಿಳಂಬವಾಗಿತ್ತು. ಇದೀಗ ಐಪಿಎಲ್ ಅಧ್ಯಕ್ಷ ಅರುಣ್ ಧಮಾಲ್ ಮಹತ್ವದ ಹೇಳಿಕೆ ನೀಡಿದ್ದು, ವಿವಾದಗಳಿಗೆ ತೆರೆ ಎಳೆದಿದ್ದಾರೆ.
ಈ ಬಾರಿ ಏಷ್ಯಾಕಪ್ ಗಾಗಿ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಹೋಗುವುದಿಲ್ಲ, ಬದಲಾಗಿ ಟಿಂ ಇಂಡಿಯಾ ಶ್ರೀಲಂಕಾ ನೆಲದಲ್ಲಿ ಪಾಕ್ ತಂಡವನ್ನು ಎದುರಿಸಲಿದೆ. ಎಲ್ಲಾ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ ಎಂದಿದ್ದಾರೆ.
ದಕ್ಷಿಣ ಅಫ್ರಿಕಾದಲ್ಲಿ ನಡೆದ ಮಹತ್ವದ ಸಭೆ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.