ಕೋಲಾರ : ಕರ್ನಾಟಕ ಸೇರಿದಂತೆ ದೇಶಾದ್ಯಂತ ಟೊಮೆಟೊ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಇಂದು ಮತ್ತೆ ಟೊಮೆಟೊ ಬೆಲೆಯಲ್ಲಿ ಏರಿಕೆಯಾಗಿದ್ದು, ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ.
15 ಕೆಜಿ ಬಾಕ್ಸ್ ಟೊಮೆಟೊ ಬೆಲೆ 800 -900 ರೂ.ವರೆಗೆ ಇದ್ದ ಬೆಲೆ ಇಂದು 1,800 ರೂ.ಗೆ ಮಾರಾಟವಾಗಿದೆ. ಈ ಮೂಲಕ ಹೊಸ ದಾಖಲೆ ಬರೆದಿದೆ. ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ 15 ಕೆಜಿ ಬಾಕ್ಸ್ ಟೊಮೆಟೋ 1600 ರೂಪಾಯಿಗೆ ಹರಾಜಾಗಿತ್ತು, ಇಂದು ಟೊಮೆಟೋ 1800 ರೂ.ಗೆ ಹರಾಜಾಗಿದೆ ಎಂದು ವರದಿಯಾಗಿದೆ.
ಕರ್ನಾಟಕ ಸೇರಿದಂತೆ ದೇಶಾದ್ಯಂತ ಟೊಮೆಟೊ ಬೆಲೆ 100 ರೂ. ಗಡಿ ದಾಟಿದ್ದು, ಇನ್ನೂ ಒಂದರಿಂದ ಎರಡು ತಿಂಗಳ ಕಾಲ ಟೊಮೆಟೊ ಬೆಲೆ ಕಡಿಮೆ ಆಗುವ ಲಕ್ಷಣಗಳು ಕಾಣುತ್ತಿಲ್ಲ. ಹೊಸ ಬೆಳೆ ಬಂದ ಮೇಲೆ ಮಾತ್ರ ಬೆಲೆ ಕಡಿಮೆಯಾಗುವ ಸಂಭವವಿದ್ದು, ಈ ಹೊಸ ಬೆಳೆ ಬರಬೇಕಾದ್ರೆ ಒಂದರಿಂದ ಎರಡು ತಿಂಗಳು ಬೇಕು. ಹೀಗಾಗಿ ಇದೇ ಬೆಲೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಮಳೆ ಕೊರತೆಯಿಂದಾಗಿ ಟೊಮೆಟೊ ಬೆಲೆಯಲ್ಲಿ ಏರಿಕೆಗೆ ಕಾರಣವಾಗಿದ್ದು, ಉತ್ತರ ಪ್ರದೇಶ, ಚತ್ತೀಸ್ ಘಡ ರಾಜ್ಯಗಳಲ್ಲಿ ಟೊಮೆಟೊ ಬೆಳೆ ಈ ವರ್ಷ ಕಡಿಮೆಯಾಗಿದೆ. ಹೀಗಾಗಿ ಈ ಭಾಗಗಳಿಂದ ಕರ್ನಾಟಕಕ್ಕೆ ಹೆಚ್ಚಿನ ಬೇಡಿಕೆ ಬಂದಿದ್ದು, ಕರ್ನಾಟಕದಿಂದ ಈ ಭಾಗಗಳಿಗೆ ಟೊಮೆಟೊ ರಪ್ತು ಮಾಡುತ್ತಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.