HomeKarnatakaಕಾಯಂ ನಿರೀಕ್ಷೆಯಲ್ಲಿದ್ದ `ಆಶಾ ಕಾರ್ಯಕರ್ತೆ’ಯರಿಗೆ ಬಿಗ್ ಶಾಕ್!

ಕಾಯಂ ನಿರೀಕ್ಷೆಯಲ್ಲಿದ್ದ `ಆಶಾ ಕಾರ್ಯಕರ್ತೆ’ಯರಿಗೆ ಬಿಗ್ ಶಾಕ್!

ಬೆಂಗಳೂರು : ಕಾಯಂ ನಿರೀಕ್ಷೆಯಲ್ಲಿದ್ದ ಆಶಾ ಕಾರ್ಯಕರ್ತೆಯರಿಗೆ ಸಚಿವ ದಿನೇಶ್ ಗುಂಡೂರಾವ್ ಬಿಗ್ ಶಾಕ್ ನೀಡಿದ್ದು, ಆಶಾ ಕಾರ್ಯಕರ್ತೆಯರ ಸೇವೆ ಕಾಯಂ ಅಸಾಧ್ಯ ಎಂದು ಹೇಳಿದ್ದಾರೆ.

ವಿಧಾನಪರಿಷತ್ ನಲ್ಲಿ ಜೆಡಿಎಸ್ ನ ಎ.ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ದಿನೇಶ್ ಗುಂಡೂರಾವ್, ಈಗಿರುವ ನಿಯಮಾವಳಿ ಪ್ರಕಾರ ಆಶಾ ಕಾರ್ಯಕರ್ತರ ಸೇವೆಯನ್ನು ಕಾಯಂ ಮಾಡಲು ಬರುವುದಿಲ್ಲ. ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪೂರ್ಣವಧಿ ಅಥವಾ ಅರೆಕಾಲಿಕ ನೌಕರರಲ್ಲ. ಆದರೆ ಅವರಿಗೆ ಕಾರ್ಯನಿರ್ವಹಣೆ ಆಧಾರದ ಮೇಲೆ ಗೌರವಧನ ಹಾಗೂ ಪ್ರೋತ್ಸಾಹಧನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರದಿಂದ ನಿಶ್ಚಿತ ಮಾಸಿಕ 5 ಸಾವಿರ ರೂ. ನೀಡಲಾಗುತ್ತದೆ. ಒಟ್ಟಾರೆ ಮಾಸಿಕ 10 ರಿಂದ 13 ಸಾವಿರ ರೂ. ದೊರೆಯುತ್ತದೆ. ಜೊತೆಗೆ ಸ್ಮಾರ್ಟ್ ಫೋನ್ ಹಾಗೂ ರೀಚಾರ್ಜ್ ಮೊತ್ತವನ್ನು ಕೊಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular