ಮೈಸೂರು : ನದಿಗೆ ಹಾರಿ ದೇವನೂರು ಮಠದ ಕಿರಿಯ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನಲ್ಲಿ ನಡೆದಿದೆ.
ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ದೇವನೂರು ಮಠದ ಕಿರಿಯ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ನಂಜನಗೂಡಿನ ದೇವನೂರು ಮಠದ ಕಿರಿಯ ಸ್ವಾಮೀಜಿ ಶಿವಪ್ಪ ದೇವರು ಎಂಬ ಸ್ವಾಮೀಜಿ ಮುಡುಕುತೊರೆ ಬಳಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಪ್ಪ ದೇವರು ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದರು. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕಳೆದ 45 ವರ್ಷಗಳಿಂದ ದೇವನೂರು ಮಠದಲ್ಲಿ ಸ್ವಾಮೀಜಿ ಶಿಷ್ಯರಾಗಿ ಸೇವೆ ಮಾಡಿಕೊಂಡಿದ್ದರು.