
ದಸರಾ ಮಹೋತ್ಸವದ ವೇಳೆ ದಲಿತ ಸಂಘರ್ಷ ಸಮಿತಿ ವತಿಯಿಂದ ಬೆಟ್ಟದ ಮಹಿಷಾಸುರ ಪ್ರತಿಮೆ ಮುಂದೆ ಮಹಿಷಾ ದಸರಾ ನಡೆಯುತ್ತಿತ್ತು. ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದಕ್ಕೆ ತಡೆ ನೀಡಲಾಗಿತ್ತು. ಇದೀಗ ಈ ಕುರಿತು ಸಚಿವ ಡಾ. ಎಚ್.ಸಿ. ಮಹದೇವಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಧಾರ್ಮಿಕ ಸ್ವಾತಂತ್ರ್ಯ ಎಂಬುದು ಸಂವಿಧಾನಬದ್ಧ ಹಕ್ಕು . ಯಾರು ಯಾವ ಆಚರಣೆಯನ್ನು ಬೇಕಾದರೂ ಮಾಡಬಹುದು. ಯಾವ ಆಚರಣೆ ಬೇಕು, ಬೇಡ ಅಂತಾ ಸರ್ಕಾರ ತೀರ್ಮಾನ ಮಾಡಲು ಅವಕಾಶ ಇಲ್ಲ. ಮೈಸೂರು ದಸರಾಗೆ ಸಿದ್ದತೆ ಮಾಡಿಕೊಳ್ಳಲು ಸಿಎಂ ಸೂಚನೆ ನೀಡಿದ್ದಾರೆ. ಈ ತಿಂಗಳ ಅಂತ್ಯದಲ್ಲಿ ಉನ್ನತ ಮಟ್ಟದ ಸಮಿತಿ ಸಭೆ ನಡೆಯಲಿದೆ. ಅದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದರು. ಮಹಿಷ ದಸರಾಕ್ಕೆ ಅವಕಾಶ ನೀಡುವ ವಿಚಾರ ಇನ್ನೂ ನಮ್ಮ ಮುಂದೆ ಬಂದಿಲ್ಲ. ಬಂದರೆ ಪರಿಶೀಲಿಸುತ್ತೇವೆ ಎಂದು ಹೇಳಿದ್ದಾರೆ.

