ಮಾರುಕಟ್ಟೆಯಲ್ಲಿನ ಅತ್ಯಂತ ದುಬಾರಿ ಸ್ಮಾರ್ಟ್‌ಫೋನ್ ಗಳ ವಿಷಯಕ್ಕೆ ಬಂದಾಗ, ಕೆಲವು ಹೆಸರುಗಳು ಮನಸ್ಸಿಗೆ ಬರುತ್ತವೆ. Samsung Galaxy S23 Ultra, Pixel Fold, ಮತ್ತು iPhone 14 Pro Max ಮೊದಲಾದವು.
ರಷ್ಯಾದ ಕಂಪನಿ ಕ್ಯಾವಿಯರ್ ನಿಂದ ಡೈಮಂಡ್ ಸ್ನೋಫ್ಲೇಕ್ ಎಂದು ಹೆಸರಿಸಲಾದ ವಿಶೇಷ ಆವೃತ್ತಿಯ ಐಫೋನ್ 14 ಪ್ರೊ ಸುಮಾರು 5 ಕೋಟಿ ರೂಪಾಯಿಗಳಷ್ಟು ವೆಚ್ಚವಾಗುತ್ತದೆ. ಇದು ಭಾರತದಲ್ಲಿ ಫೆರಾರಿ ಎಫ್ 8 ಬೆಲೆಗಿಂತ ಹೆಚ್ಚಿನದಾಗಿದೆ.
ಬ್ರಿಟಿಷ್ ಆಭರಣ ಬ್ರ್ಯಾಂಡ್ ಗ್ರಾಫ್ ಸಹಯೋಗದೊಂದಿಗೆ ಕ್ಯಾವಿಯರ್ ಐಫೋನ್ 14 ಪ್ರೊ ಮ್ಯಾಕ್ಸ್‌ನ ವಿಶೇಷ ಆವೃತ್ತಿಯನ್ನು ಅಭಿವೃದ್ಧಿಪಡಿಸಿದೆ. ಇದಲ್ಲದೆ, ಈ ವಿಶೇಷ ಆವೃತ್ತಿಯ ಐಫೋನ್‌ಗಳಲ್ಲಿ ಮೂರು ಮಾತ್ರ ಇಡೀ ಪ್ರಪಂಚದಲ್ಲಿ ಅಸ್ತಿತ್ವದಲ್ಲಿವೆ.
ಸಾಧನದ ಹಿಂಭಾಗವು ಪ್ಲಾಟಿನಂ ಮತ್ತು ಬಿಳಿ ಚಿನ್ನದ ಪೆಂಡೆಂಟ್ ಅನ್ನು ಹೊಂದಿದೆ. ಇದು ಮಾರ್ಕ್ವೈಸ್-ಕಟ್ ವಜ್ರಗಳಿಂದ ಅಲಂಕರಿಸಲ್ಪಟ್ಟಿದೆ. ಅಂದಾಜು 62 ಲಕ್ಷ ರೂ. 18-ಕ್ಯಾರಟ್ ಬಿಳಿ ಚಿನ್ನದಿಂದ ಮಾಡಿದ ಬ್ಯಾಕ್‌ಪ್ಲೇಟ್, 570 ವಜ್ರಗಳೊಂದಿಗೆ ರಚಿಸಲಾದ ಮಾದರಿಯನ್ನು ಪ್ರದರ್ಶಿಸುತ್ತದೆ. ವಜ್ರಗಳು ಮತ್ತು ಅಪರೂಪದ ಲೋಹಗಳ ಬಳಕೆಯಿಂದಾಗಿ ಈ ಸಾಧನದ ಬೆಲೆ ಸುಮಾರು 5 ಕೋಟಿ ರೂ.ಗೆ ಏರಿದೆ. ಇದು ಗಣ್ಯರಿಗೆ ಮಾತ್ರ ಕೈಗೆಟುಕುವಂತೆ ಮಾಡಿದೆ. 5 ಕೋಟಿ ಬೆಲೆಯ ವಿಶೇಷ ಆವೃತ್ತಿಯ iPhone 14 Pro Max ಅನ್ನು ಖರೀದಿಸಲು ಆಸಕ್ತಿ ಹೊಂದಿರುವ ಜನರ ಸಂಖ್ಯೆಯು ಬೆರಳೆಣಿಕೆಯಷ್ಟಿರಬಹುದು ಎಂದು ಹೇಳಲಾಗಿದೆ.