ಮಾರುತಿ ಸುಜುಕಿ ಬಲೆನೊ ದೇಶದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಕೈಗೆಟುಕುವ ಬೆಲೆ, ಸೊಗಸಾದ ನೋಟ ಮತ್ತು ಅತ್ಯುತ್ತಮ ಮೈಲೇಜ್‌ನಿಂದಾಗಿ ಗ್ರಾಹಕರು ಬಲೆನೊವನ್ನು ಇಷ್ಟಪಟ್ಟಿದ್ದಾರೆ. ಆದರೆ ಈಗ ಈ ಬಜೆಟ್‌ನಲ್ಲಿ ಹೊಸ ಸಿಎನ್‌ಜಿ ಕಾರೊಂದು ಎಂಟ್ರಿ ಕೊಟ್ಟಿದೆ. ಈ ಕಾರು ಸುರಕ್ಷತೆಯ ದೃಷ್ಟಿಯಿಂದ 5 ಸ್ಟಾರ್ ರೇಟಿಂಗ್ ಪಡೆದಿದೆ. ಇದರ ವೆಚ್ಚವೂ ಹೆಚ್ಚಿಲ್ಲ. ಟಾಟಾ ಆಲ್ಟ್ರೋಜ್ ಸಿಎನ್‌ಜಿ ಕಾರು ಬಲೆನೊವನ್ನೂ ಮೀರಿಸುವಂತಿದೆ.
ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ CNG ರೂಪಾಂತರದ ಬೆಲೆ 7.55 ಲಕ್ಷದಿಂದ ಪ್ರಾರಂಭ. ಉನ್ನತ ಮಾದರಿಗೆ 10.55 ಲಕ್ಷ ರೂಪಾಯಿ ಇದೆ. ಟಾಟಾ ಆಲ್ಟ್ರೋಜ್ ಸಿಎನ್‌ಜಿ ಹ್ಯಾಚ್‌ಬ್ಯಾಕ್ ವಿನ್ಯಾಸದ ವಿಷಯದಲ್ಲಿ ಪೆಟ್ರೋಲ್ ಮಾದರಿಗಿಂತ ಹೆಚ್ಚು ಭಿನ್ನವಾಗಿಲ್ಲ. ಇದರಲ್ಲಿ ಕೇವಲ ‘iCNG’ ಬ್ಯಾಡ್ಜಿಂಗ್ ಅನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಎರಡು ಸಿಎನ್‌ಜಿ ಟ್ಯಾಂಕ್‌ಗಳನ್ನು ಬೂಟ್‌ನಲ್ಲಿ ಇರಿಸಲಾಗಿದೆ. ಆದರೂ CNG ಆವೃತ್ತಿಯಲ್ಲಿ ಸಾಕಷ್ಟು ಬೂಟ್ ಸ್ಪೇಸ್ ಇದೆ.
ಈ ಕಾರು 1.2 ಲೀಟರ್ ರೆವೊಟ್ರಾನ್ ಡಬಲ್ ಎಂಜಿನ್ ಹೊಂದಿದೆ. ಪೆಟ್ರೋಲ್ ಮೋಡ್‌ನಲ್ಲಿ, ಈ ಎಂಜಿನ್ 88 PS ಪವರ್ ಮತ್ತು 115 Nm ಗರಿಷ್ಠ ಶಕ್ತಿ, ಟಾರ್ಕ್ ಅನ್ನು ಉತ್ಪಾದಿಸುತ್ತದೆ. CNG ಮೋಡ್‌ನಲ್ಲಿ, ಈ ಎಂಜಿನ್ 73.5 PS ಪವರ್ ಮತ್ತು 103 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರಿನಲ್ಲಿ ಎಲೆಕ್ಟ್ರಿಕ್ ಸನ್‌ರೂಫ್ ಅಳವಡಿಸಲಾಗಿದೆ. ಇದಲ್ಲದೆ ಸುರಕ್ಷತಾ ವೈಶಿಷ್ಟ್ಯಗಳ ಕೊರತೆಯಿಲ್ಲ.
ಇದರಲ್ಲಿರುವ ಮೈಕ್ರೋ ಸ್ವಿಚ್ ಸಿಎನ್‌ಜಿಯನ್ನು ತುಂಬುವಾಗ ಕಾರಿನ ಇಗ್ನಿಷನ್ ಅನ್ನು ಆಫ್ ಮಾಡುತ್ತದೆ. 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್ (ಇಬಿಡಿ) ಜೊತೆಗೆ ಎಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್) ಮತ್ತು ಸ್ಟೆಬಿಲಿಟಿ ಕಂಟ್ರೋಲ್‌ನಂತಹ ವೈಶಿಷ್ಟ್ಯಗಳನ್ನು ಸಹ ಹೊಂದಿದೆ. Altrozಗೆ ಹೋಲಿಸಿದರೆ ಇದರಲ್ಲಿ ಫೀಚರ್ಸ್ ಜಾಸ್ತಿಯಿದೆ.
ಟಾಟಾ ಆಲ್ಟ್ರೋಜ್ ಬೆಲೆ
ಟಾಟಾ ಆಲ್ಟ್ರೋಜ್ iCNG XE – 7.55 ಲಕ್ಷ
ಟಾಟಾ ಆಲ್ಟ್ರೋಜ್ iCNG XM+ – 8.40 ಲಕ್ಷ
ಟಾಟಾ ಆಲ್ಟ್ರೋಜ್ iCNG XM+ (S) – 8.85 ಲಕ್ಷ
ಟಾಟಾ ಆಲ್ಟ್ರೋಜ್ iCNG XZ – 9.53 ಲಕ್ಷ
ಟಾಟಾ ಆಲ್ಟ್ರೋಜ್ iCNG XZ+ (S) – 10.03 ಲಕ್ಷ
ಟಾಟಾ ಆಲ್ಟ್ರೋಜ್ iCNG XZ+O (S) – 10.55 ಲಕ್ಷ