ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಯುಜಿಸಿ ನೆಟ್ ಜೂನ್ 2023 ರ ಕೀ ಉತ್ತರಗಳನ್ನು ಇಂದು ಬಿಡುಗಡೆ ಮಾಡಿದೆ.
ಯುಜಿಸಿ ನೆಟ್ ಜೂನ್ 2023 ಪರೀಕ್ಷೆಯನ್ನು ಜೂನ್ನಲ್ಲಿ ಹಂತ ಹಂತವಾಗಿ ನಡೆಸಲಾಯಿತು. ಅಭ್ಯರ್ಥಿಗಳು ಈಗ ಯುಜಿಸಿ ನೆಟ್ ಕೀ ಉತ್ತರಗಳನ್ನು ugcnet.nta.nic.in ಭೇಟಿ ನೀಡುವ ಮೂಲಕ ಡೌನ್ಲೋಡ್ ಮಾಡಬಹುದು. ಕೀ ಉತ್ತರ ಪರಿಶೀಲಿಸಿಲು ಅಭ್ಯರ್ಥಿಗಳು ತಮ್ಮ ಅಪ್ಲಿಕೇಶನ್ ಸಂಖ್ಯೆ ಮತ್ತು ಪಾಸ್ವರ್ಡ್ ಅಥವಾ ಹುಟ್ಟಿದ ದಿನಾಂಕದೊಂದಿಗೆ ಲಾಗ್ ಇನ್ ಮಾಡಬೇಕಾಗುತ್ತದೆ.
ತಾತ್ಕಾಲಿಕ ಕೀ ಉತ್ತರ ಡೌನ್ಲೋಡ್ ಮಾಡುವುದು ಹೇಗೆ?
1) ಅಧಿಕೃತ ವೆಬ್ಸೈಟ್ ugcnet.nta.nic.in ಗೆ ಭೇಟಿ ನೀಡಿ.
2) ಮುಖಪುಟದಲ್ಲಿ UGC NET June 2023 Answer Key ಲಿಂಕ್ ಮೇಲೆ ಕ್ಲಿಕ್ ಮಾಡಿ.
3) ಆ ಪುಟದಲ್ಲಿ ಅಪ್ಲಿಕೇಶನ್ ನಂಬರ್ ಮತ್ತು ಜನ್ಮದಿನಾಂಕವನ್ನು ನಮೂದಿಸಿ.
4) ನಂತರ ‘Submit’ ನೀಡಿ.
5) ಆಗ ನಿಮಗೆ ಪರದೆಯ ಮೇಲೆ ತಾತ್ಕಾಲಿಕ ಕೀ ಉತ್ತರಗಳು ಕಾಣಸಿಗುತ್ತದೆ. ಅದನ್ನು ಡೌನ್ಲೋಡ್ ಮಾಡಿಕೊಂಡು ಪರಿಶೀಲಿಸಿಕೊಳ್ಳಿ.