ಬೆಂಗಳೂರು : ‘ಗೋಹತ್ಯೆ ನಿಷೇಧ’ ಕಾಯ್ದೆ ಹಿಂಪಡೆಯುತ್ತೇವೆ ಎಂದು ನಾವು ಹೇಳಿಲ್ಲ ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಸ್ಪಷ್ಟನೆ ನೀಡಿದ್ದಾರೆ.
ವಿಧಾನ ಪರಿಷತ್ ನಲ್ಲಿ ಮಾತನಾಡಿದ ಸಚಿವ ಕೆ.ವೆಂಕಟೇಶ್ ಗೋಹತ್ಯೆ ಕಾಯ್ದೆ ಬಗ್ಗೆ ಪಕ್ಷದ ಒಳಗಡೆ ಚರ್ಚೆ ನಡೆಯುತ್ತಿದೆ, ಗೋಹತ್ಯೆ ನಿಷೇಧ’ ಕಾಯ್ದೆ ಹಿಂಪಡೆಯುತ್ತೇವೆ ಎಂದು ನಾವು ಹೇಳಿಲ್ಲ ಎಂದು ಹೇಳಿದರು
ಈ ವೇಳೆ ಮಾತನಾಡಿದ ಸಭಾಪತಿ ಹೊರಟ್ಟಿ ಗೋಹತ್ಯೆ ಬಗ್ಗೆ ದಾಖಲೆ ಏನಾದ್ರೂ ಇದ್ರೆ ನೀಡಲಿ. ಪರಿಶೀಲಿಸಿ ಅವಕಾಶ ನೀಡುತ್ತೇವೆ ಎಂದರು. ನಂತರ ಬಿಜೆಪಿ ಸದಸ್ಯರು ಪ್ರತಿಭಟನೆ ಹಿಂಪಡೆದರು.
ಸಚಿವರು ವರ್ಗಾವಣೆ ದಂಧೆಯಲ್ಲಿದ್ದರೆ ಮುಗಿಸಿಕೊಂಡೇ ಬರಲಿ…ಸದನಕ್ಕೆ ಗೈರಾದ ಸಚಿವರ ವಿರುದ್ಧ ಬಿಜೆಪಿ ಸದಸ್ಯರು ಕೆಂಡಾಮಂಡಲ
ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ವೇಳೆ ಗೈರಾದ ಸಚಿವರುಗಳ ವಿರುದ್ಧ ಬಿಜೆಪಿ ಸದಸ್ಯರು ಕೆರಳಿ ಕೆಂಡವಾದ ಘಟನೆ ವಿಧಾನಸಭೆಯಲ್ಲಿ ನಡೆದಿದೆ.
ಭೋಜನ ವಿರಾಮದ ನಂತರ ವಿಧಾನಸಭಾ ಕಲಾಪ ಆರಂಭವಾಗುತ್ತಿದ್ದಂತೆ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಸಾಗರ ಶಾಸಕ ಬೇಳೂರು ಗೋಪಾಲ ಕೃಷ್ಣ ಚರ್ಚೆ ಮುಂದುವರೆಸಿದರು. ಈ ವೇಳೆ ಕಲಾಪ ಆರಂಭವಾದರೂ ಸದನಕ್ಕೆ ಬಾರದ ಸಚಿವರ ವಿರುದ್ಧ ಬಿಜೆಪಿ ಸದಸ್ಯರು ವಾಗ್ದಾಳಿ ನಡೆಸಿದ್ದಾರೆ.ಈ ವೇಳೆ ಮಾತನಾಡಿದ ಶಾಸಕ ಸುನೀಲ್ ಕುಮಾರ್, ಕಲಾಪ ಆರಂಭವಾದರೂ ಸಚಿವರು ಆಗಮಿಸಿಲ್ಲ. ಸಚಿವರು ವರ್ಗಾವಣೆ ದಂಧೆಯಲ್ಲಿ ಇದ್ದಾರೆ ಎಂದರೆ ಮುಗಿಸಿಕೊಂಡೇ ಬರಲಿ… ಸದನವನ್ನು ಸ್ವಲ್ಪ ಹೊತ್ತು ಮುಂದೂಡಿ ಎಂದು ಸ್ಪೀಕರ್ ಖಾದರ್ ಅವರಿಗೆ ಒತ್ತಾಯಿಸಿದರು.