HomeKarnatakaBIG NEWS: ಕೊಬ್ಬರಿಗೆ ಇಂದೇ ಬೆಂಬಲ ಬೆಲೆ ನಿರ್ಣಯ ಮಾಡದಿದ್ದರೆ ಸದನದಲ್ಲಿ ಅಹೋರಾತ್ರಿ ಧರಣಿ :...

BIG NEWS: ಕೊಬ್ಬರಿಗೆ ಇಂದೇ ಬೆಂಬಲ ಬೆಲೆ ನಿರ್ಣಯ ಮಾಡದಿದ್ದರೆ ಸದನದಲ್ಲಿ ಅಹೋರಾತ್ರಿ ಧರಣಿ : H.D ರೇವಣ್ಣ ಎಚ್ಚರಿಕೆ

ಬೆಂಗಳೂರು: ಕೊಬ್ಬರಿಗೆ ಬೆಂಬಲ ಬೆಲೆ ವಿಚಾರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ್ದು, ಸರ್ಕಾರ ಇಂದೇ ಬೆಂಬಲ ಬೆಲೆ ನಿಗದಿ ಮಾಡಬೇಕು ಇಲ್ಲವಾದಲ್ಲಿ ಸದನದಲ್ಲಿ ಅಹೋರಾತ್ರಿ ಧರಣಿ ಮಾಡುವುದಾಗಿ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಎಚ್ಚರಿಕೆ ನೀಡಿದ್ದಾರೆ.

ವಿಧಾನಸಭೆಯಲ್ಲಿ ನಿಯಮ 69ರಡಿ ಕೊಬ್ಬರಿಗೆ ಬೆಂಬಲ ಬೆಲೆ ಬಗ್ಗೆ ಚರ್ಚೆ ನಡೆಯಿತು. ಈ ವೇಳೆ ಮಾತನಾಡಿದ ಶಾಸಕ ಹೆಚ್.ಡಿ.ರೇವಣ್ಣ, ಕೊಬ್ಬರಿಗೆ ಬೆಂಬಲ ಬೆಲೆ ನಿರ್ಣಯ ಮಾಡಬೇಕು. ಸರ್ಕಾರ ಇಂದೇ ಬೆಂಬಲ ಬೆಲೆ ಬಗ್ಗೆ ನಿರ್ಣಯ ಮಾಡಲಿ. ಇಲ್ಲವಾದರೇ ಇಲ್ಲೇ ಪಂಚೆ ಹಾಸಿಕೊಂಡು ಸದನದಲ್ಲೇ ಮಲಗುತ್ತೇವೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ಪೀಕರ್ ಯು.ಟಿ.ಖಾದರ್ ಅವರೇ ಊಟ ಹಾಕಿಸುತ್ತಾರೆ. ಕೊಬ್ಬರಿಗೆ ಇಂದೇ ಬೆಂಬಲ ಬೆಲೆ ತೀರ್ಮಾನ ಮಾಡಲಿ. ಇಲ್ಲವಾದರೆ ನಾವು ಸದನದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತೇವೆ ಎಂದು ಪಟ್ಟು ಹಿಡಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular