ಮಕ್ಕಳಿಗೆ ಅತಿಯಾಗಿ ಚಾಕಲೇಟ್‌ ಕೊಡುವುದರಿಂದ ಆಗಬಹುದು ಇಷ್ಟೆಲ್ಲಾ ಅಪಾಯ, ಪೋಷಕರೇ ಇರಲಿ ಎಚ್ಚರ….!

ಚಾಕಲೇಟ್ ತಿನ್ನಲು ವಯಸ್ಸಿನ ಮಿತಿಯಿಲ್ಲ. ಆದರೆ ಚಿಕ್ಕ ಮಕ್ಕಳು ಅದನ್ನು ತುಂಬಾ ಇಷ್ಟಪಡುತ್ತಾರೆ. ಆದರೆ ಹೆಚ್ಚು ಚಾಕಲೇಟ್ ತಿನ್ನುವುದರಿಂದ ಮಗು ಪೌಷ್ಠಿಕ ಆಹಾರದಿಂದ ದೂರ ಸರಿಯುತ್ತದೆ ಎನ್ನುತ್ತಾರೆ ತಜ್ಞರು. ಇದಲ್ಲದೇ ಹೊಟ್ಟೆ ಸರಿಯಾಗಿ ತುಂಬದ ಮಕ್ಕಳು ಚಾಕಲೇಟ್ ತಿಂದು ಸಂತೃಪ್ತಿ ಪಡೆಯುತ್ತಾರೆ. ಚಾಕೊಲೇಟ್ ತಿನ್ನುವುದರಿಂದ ದೇಹಕ್ಕೆ ತ್ವರಿತ ಶಕ್ತಿ ಬರುತ್ತದೆ. ಮಕ್ಕಳನ್ನು ಸೆಳೆಯುವಂತಹ ಅದ್ಭುತ ರುಚಿ ಚಾಕಲೇಟ್‌ನಲ್ಲಿರುತ್ತದೆ.

ಆದರೆ ಅತಿಯಾಗಿ ಚಾಕಲೇಟ್ ತಿನ್ನುವುದರಿಂದ ಮಗು ಹಲವಾರು ಕಾಯಿಲೆಗಳಿಗೆ ಗುರಿಯಾಗಬಹುದು.  ಹೆಚ್ಚು ಚಾಕಲೇಟ್ ತಿನ್ನುವುದರಿಂದ ಮಗುವಿನ ನಿದ್ದೆಗೆ ಭಂಗ ಬರುತ್ತದೆ. ತಜ್ಞರ ಪ್ರಕಾರ ಚಾಕಲೇಟ್‌ನಲ್ಲಿ ಹೆಚ್ಚಿನ ಪ್ರಮಾಣದ ಕೆಫೀನ್ ಇದ್ದರೆ ಮಗುವಿಗೆ ಸರಿಯಾಗಿ ನಿದ್ರೆ ಬರುವುದಿಲ್ಲ. ರಾತ್ರಿ ಮಗು ಪದೇ ಪದೇ ಏಳುವುದು, ಚೆನ್ನಾಗಿ ನಿದ್ರಿಸದೇ ಇರುವ ಸಾಧ್ಯತೆ ಇರುತ್ತದೆ. ಅದಕ್ಕಾಗಿಯೇ ರಾತ್ರಿಯಲ್ಲಿ ಚಿಕ್ಕ ಮಕ್ಕಳಿಗೆ ಚಾಕಲೇಟ್ ನೀಡಬಾರದು.

ಚಿಕ್ಕ ವಯಸ್ಸಿನಲ್ಲಿ ಹೆಚ್ಚು ಚಾಕಲೇಟ್ ತಿನ್ನುವುದರಿಂದ ಮಗುವಿನ ಹಲ್ಲುಗಳು ಹುಳುಕಾಗುತ್ತವೆ. ಚಾಕಲೇಟ್ ಸೇವಿಸಿದ ನಂತರ ಬಾಯಿಯನ್ನು ಚೆನ್ನಾಗಿ ತೊಳೆಯದಿದ್ದರೆ ಹಲ್ಲು ಹುಳುಕಾಗುತ್ತದೆ. ಹೆಚ್ಚು ಚಾಕಲೇಟ್ ತಿಂದರೆ ಅಸಿಡಿಟಿ ಅಥವಾ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಇದಲ್ಲದೆ ಚಾಕಲೇಟ್ ಹೊಟ್ಟೆಗೆ ಭಾರವಾಗಿರುತ್ತದೆ.ಅತಿಯಾದ ಚಾಕಲೇಟ್‌ ಸೇವನೆಯಿಂದ ಮಗುವಿನ ತೂಕ ವಿಪರೀತ ಹೆಚ್ಚಾಗುವ ಸಾಧ್ಯತೆಯೂ ಇದೆ.

ಹೆಚ್ಚು ಚಾಕಲೇಟ್ ತಿನ್ನುವುದರಿಂದ ಮಗು,  ಬೊಜ್ಜು, ಎದೆಯುರಿ, ತಲೆನೋವು ಮುಂತಾದ ಸಮಸ್ಯೆಗಳಿಗೆ ತುತ್ತಾಗುತ್ತದೆ. ರಕ್ತದಲ್ಲಿನ ಗ್ಲೂಕೋಸ್ ಹೆಚ್ಚಾಗುತ್ತದೆ. ಇದರಿಂದಾಗಿ ಮಕ್ಕಳಿಗೂ ಬೊಜ್ಜು, ಥೈರಾಯ್ಡ್ ಮತ್ತು ಮಧುಮೇಹದಂತಹ ಸಮಸ್ಯೆಗಳು ಬರುವ ಅಪಾಯವಿರುತ್ತದೆ. ಹಾಗಾಗಿ ಮಕ್ಕಳಿಗೆ ಚಾಕಲೇಟ್‌ ಅನ್ನು ಮಿತವಾಗಿ ಕೊಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read