‘ಹಲವು ದಿನಗಳಿಂದ ನಾನು ನಿದ್ದೆನೇ ಮಾಡಿಲ್ಲ’ ನಟ ದುಲ್ಕರ್ ಸಲ್ಮಾನ್ ಭಾವುಕ ಪೋಸ್ಟ್ ನೋಡಿ ಅಭಿಮಾನಿಗಳಿಗೆ ಟೆನ್ಷನ್

ನಟ ದುಲ್ಕರ್ ಸಲ್ಮಾನ್ ಮೂಲತಃ ಮಲಯಾಳಂ ನಟ ಆದರೂ, ಹಿಂದಿ ಸೇರಿದಂತೆ ಅನೇಕ ಭಾಷೆಗಳಲ್ಲಿ ನಟಿಸಿ ಎಲ್ಲರಿಂದ ಸೈ ಅನಿಸಿಕೊಂಡವರು. ಅದರಲ್ಲೂ ‘ಸೀತಾ ರಾಮಂ’ ಸಿನೆಮಾದಲ್ಲಿ ಇವರ ಮನೋಜ್ಞ ಅಭಿನಯಕ್ಕೆ ಸಿನಿಪ್ರೇಕ್ಷಕರು ಫುಲ್ ಫಿದಾ ಆಗ್ಹೋಗಿದ್ದರು. ಇದೇ ನಟ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್​​ನಲ್ಲಿ ಮಾಡಿರುವ ಪೋಸ್ಟ್ ನೋಡಿ ಅಭಿಮಾನಿಗಳು ಫುಲ್ ಟೆನ್ಷನ್ ಮಾಡಿಕೊಂಡಿದ್ದಾರೆ.

ಈ ವಿಡಿಯೋದಲ್ಲಿ ನಟ ದುಲ್ಕರ್ ಸಲ್ಮಾನ್ ಕಣ್ಣಲ್ಲಿ ನೀರು ತುಂಬಿಕೊಂಡು ಮನಸ್ಸಲ್ಲಿ ಹೇಳಿಕೊಳ್ಳಲಾಗದೇ ಇರುವಷ್ಟು ನೋವಿದೆ, ಎಂಬ ಶೀರ್ಷಿಕೆ ಇರುವ ವಿಡಿಯೋ ಒಂದನ್ನ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅವರು ನಾನು ತುಂಬಾ ದಿನದಿಂದ ನಿದ್ದೆ ಮಾಡದೆ ಸಾಕಷ್ಟು ಸಮಯವೇ ಕಳೆದಿದೆ. ನಾನು ಇದೇ ಮೊದಲ ಬಾರಿಗೆ ಹೊಸತನ್ನ ಅನುಭವಿಸಿದ್ದೇನೆ. ಇದು ನನ್ನ ಮನಸ್ಸಿನಿಂದ ಹೊರಬರಲು ಸಾಧ್ಯವಾಗದ ಹಂತವನ್ನ ತಲುಪಿದ್ದೇನೆ. ನಾನು ಹೆಚ್ಚು ಹೇಳಲು ಬಯಸುತ್ತೇನೆ, ಆದರೆ ನನಗೆ ಅದಕ್ಕೆ ಅನುಮತಿ ಇದೆಯೋ ಅಥವಾ ಇಲ್ಲವೋ ಅನ್ನೋದು ತಿಳಿಯುತ್ತಿಲ್ಲ. ಎಂದು ವಿಡಿಯೋದಲ್ಲಿ ಹೇಳಿದ್ದರು. ಪೋಸ್ಟ್ ಬಳಿಕ ಆ ವಿಡಿಯೋವನ್ನ ಡಿಲೀಟ್ ಮಾಡಿದ್ದಾರೆ. ನಟ ದುಲ್ಕರ್ ಗೆ ಏನಾಗಿದೆ ಎಂದು ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಕೆಲವೊಮ್ಮೆ ಸಿನಿಮಾ ಪ್ರಚಾರಕ್ಕೆ ಈ ರೀತಿಯ ತಂತ್ರ ಉಪಯೋಗಿಸಲಾಗುತ್ತದೆ. ಇದು ಸಿನಿಮಾ ಪ್ರಚಾರಕ್ಕೆ ಮಾಡಿದ ತಂತ್ರವೋ ಅಥವಾ ನಿಜಕ್ಕೂ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಅವರೇ ಮೌನ ಮುರಿಯಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

https://twitter.com/preethamtweets_/status/1675572060259749889?ref_src=twsrc%5Etfw%7Ctwcamp%5Etweetembed%7Ctwterm%5E1675572060259749889%7Ctwgr%5Ed3cf5bbf1084419e0a8ed592328240f9d64a54f4%7Ctwcon%5Es1_&ref_url=https%3A%2F%2Fwww.news18.com%2Fmovies%2Fdulquer-salmaan-says-i-havent-slept-in-a-while-in-cryptic-post-leaves-fans-worried-8232301.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read