HomeIndiaShocking Video | ಕಾರಿನೊಳಗೆಯೇ ಲಾಕ್ ಆದ ಶ್ವಾನ: ಉಸಿರುಗಟ್ಟಿ ವಿಲವಿಲನೆ ಒದ್ದಾಡಿ ಅಲ್ಲೇ ಸಾವು

Shocking Video | ಕಾರಿನೊಳಗೆಯೇ ಲಾಕ್ ಆದ ಶ್ವಾನ: ಉಸಿರುಗಟ್ಟಿ ವಿಲವಿಲನೆ ಒದ್ದಾಡಿ ಅಲ್ಲೇ ಸಾವು

ತಾಜ್​​ಮಹಲ್​ ನೋಡ್ತಿದ್ರೆ ಯಾರು ತಾನೆ ಕಳೆದು ಹೋಗಲ್ಲ ಹೇಳಿ. ಇಲ್ಲೊಬ್ಬ ಮಹಾಶಯ ತಾಜ್​​ಮಹಲ್​ ನೋಡೋ ಖುಷಿಯಲ್ಲಿ ತನ್ನ ಮುದ್ದಿನ ಶ್ವಾನದ ಸಾವಿಗೆ ಕಾರಣವಾಗಿದ್ದಾರೆ. ಅಸಲಿಗೆ ಗೆಳೆಯರೊಂದಿಗೆ ತಾಜ್​ಮಹಲ್​ ನೋಡುವುದಕ್ಕೆ ಹೋದ ವ್ಯಕ್ತಿ ಕಾರ್​​ನಲ್ಲೇ ಮುದ್ದಿನ ನಾಯಿಯನ್ನ ಲಾಕ್ ಮಾಡಿಟ್ಟು ಹೋಗಿದ್ದಾನೆ. ಇದರ ಪರಿಣಾಮ ಆ ಶ್ವಾನ ಉಸಿರುಗಟ್ಟಿ ಕಾರಿನೊಳಗೆ ಪ್ರಾಣ ಬಿಟ್ಟಿದೆ.

ಹರ್ಯಾಣದ ಇಬ್ಬರು ಯುವಕರು, ಇಬ್ಬರು ಯುವತಿಯರ ಸ್ನೇಹಿತರ ಗುಂಪು ಆಗ್ರಾದ ತಾಜ್​ಮಹಲ್​ ನೋಡಲು ಹೋಗಿದ್ದಾರೆ. ಹೋಗುವಾಗ ತಮ್ಮ ಜೊತೆ ತಮ್ಮ ಮುದ್ದಿನ ನಾಯಿಯನ್ನ ತೆಗೆದುಕೊಂಡು ಹೋಗಿದ್ದಾರೆ. ತಾಜ್​​ಮಹಲ್​ ಬಳಿ ಪ್ರಾಣಿಗಳನ್ನ ತೆಗೆದುಕೊಂಡು ಹೋಗುವುದು ನಿಷೇಧಿಸಲಾಗಿದೆ.

ಆದ್ದರಿಂದ ಇವರು ಕಾರಿನ ಹಿಂದಿನ ಕಿಟಕಿಯನ್ನ ಕೊಂಚ ತೆರೆದಿಟ್ಟು ಹೋಗಿದ್ದಾರೆ. ಆದರೆ ನಾಯಿಯ ಕುತ್ತಿಗೆಯ ಪಟ್ಟಿ ಹ್ಯಾಂಡ್​ ಬ್ರೇಕ್​ಗೆ ಸಿಕ್ಕಾಕಿಕೊಂಡಿದೆ. ಆಗ ಆ ನಾಯಿ ಹೊರಗೆ ಬರಲು ಪ್ರಯತ್ನಿಸಿದೆ. ಅದು ಸಾಧ್ಯವಾಗದೇ ಹೋದಾಗ ಅಲ್ಲೇ ಒದ್ದಾಡಿ ಕೊನೆಯುಸಿರೆಳೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಘಟನೆಯ ವಿಡಿಯೋವನ್ನ ಪ್ರವಾಸಿಗರೊಬ್ಬರು ತಮ್ಮ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಅದನ್ನ ಸೊಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಕೂಡ ಮಾಡಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ಶ್ವಾನದ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular