ಹೊಸದಾಗಿ ಲೋಕಾರ್ಪಣೆಗೊಂಡಿರುವ ವಂದೇ ಭಾರತ್ ಎಕ್ಸ್ಪ್ರೆಸ್ ವಿವಿಧ ರೈಲು ಮಾರ್ಗಗಳಲ್ಲಿ ಸಂಚರಿಸುತ್ತಿದ್ದು ಒಂದಿಲ್ಲೊಂದು ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಲೇ ಇದೆ. ಹಲವಾರು ಪ್ರಯಾಣಿಕರು ವಂದೇ ಭಾರತ್ ರೈಲಿನಲ್ಲಿ ತಮಗಾದ ಅನುಭವಗಳನ್ನು ಶೇರ್ ಮಾಡುತ್ತಲೇ ಇದ್ದಾರೆ.
ಅನೇಕರು ವಂದೇ ಭಾರತ್ನ ವೇಗ, ಶುಚಿತ್ವ ಹಾಗೂ ಆಹಾರದ ಗುಣಮಟ್ಟವನ್ನು ಕೊಂಡಾಡಿದ್ದಾರೆ . ಇದೀಗ ವಂದೇ ಭಾರತ್ ರೈಲಿನ ಕುರಿತಾದ ಮತ್ತೊಂದು ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗ್ತಿದೆ.
ಈ ಎಲ್ಲದರ ನಡುವೆ ವಂದೇ ಭಾರತ್ಗೆ ಸಂಬಂಧಿಸಿದ ಒಂದು ವಿಡಿಯೋ ಇಂಟರ್ನೆಟ್ನಲ್ಲಿ ಸಂಚಲನವನ್ನು ಸೃಷ್ಟಿಸಿದೆ. ಲೋಕೋ ಪೈಲಟ್ಗಳ ಜೊತೆಯಲ್ಲಿ ಪ್ರಯಾಣ ಮಾಡುವ ಅವಕಾಶ ಯುಟ್ಯೂಬರ್ ಒಬ್ಬರಿಗೆ ಸಿಕ್ಕಿತ್ತು. ಈ ಸಂದರ್ಭದಲ್ಲಿ ಅವರು ಸೆರೆ ಹಿಡಿದ ಕೆಲವು ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಜರ್ನಿಸ್ ವಿಥ್ ಎಕೆ ಎಂಬ ಯುಟ್ಯೂಬ್ ಚಾನೆಲ್ ಹೊಂದಿರುವ ಅಕ್ಷಯ್ ಮಲ್ಹೋತ್ರಾ ಕೆಲವು ದಿನಗಳ ಹಿಂದೆಯಷ್ಟೇ ಮುಂಬೈ – ಗೋವಾ ವಂದೇ ಭಾರತ್ ಎಕ್ಸ್ಪ್ರೆಸ್ನಲ್ಲಿ ತಮ್ಮ ವ್ಲಾಗ್ ಮಾಡಿದ್ದರು. ಇನ್ಸ್ಟಾಗ್ರಾಂನಲ್ಲಿ ಈ ಸಂಬಂಧ ಒಂದು ಆಕರ್ಷಕ ರೀಲ್ಸ್ ಹಂಚಿಕೊಂಡಿದ್ದಾರೆ. ಈ ರೀಲ್ಸ್ ಈಗಾಗಲೇ 2 ಮಿಲಿಯನ್ ವೀಕ್ಷಣೆ ಪಡೆದಿದೆ.
‘ಮುಂಬೈ ಗೋವಾ ವಂದೇ ಭಾರತ್ ಎಕ್ಸ್ಪ್ರೆಸ್ ಟ್ರೈನ್ ಜರ್ನಿ’ ಎಂಬ ಶೀರ್ಷಿಕೆಯ ಅವರ ವಿವರವಾದ ವ್ಲಾಗ್ನಲ್ಲಿ, ಅಕ್ಷಯ್ ರೈಲಿನ ವಿಶಾಲವಾದ ನೋಟದ ಪರಿಚಯ ಮಾಡಿದ್ದಾರೆ. ಮುಂಭಾಗದ ಕ್ಯಾಬಿನ್ ಪ್ರವೇಶವು ಅಪಾಯಕಾರಿಯಾದ ಹಿನ್ನೆಲೆಯಲ್ಲಿ ಹಿಂದಿನ ಕ್ಯಾಬಿನ್ನಲ್ಲಿಯೇ ಇದ್ದು ಶೂಟ್ ಮಾಡಿದ್ದಾರೆ. ರೈಲಿನ ರೋಮಾಂಚನಕಾರಿ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ಈ ವಿಡಿಯೋ ವೈರಲ್ ಆಗಿದೆ.