ತೂಕ ಇಳಿಸಲು ನಾವು ಸಾಕಷ್ಟು ಸರ್ಕಸ್ ಮಾಡುತ್ತೇವೆ. ಕಟ್ಟುನಿಟ್ಟಾದ ಆಹಾರಕ್ರಮ, ವ್ಯಾಯಾಮ, ಮನೆಮದ್ದುಗಳು ಹೀಗೆ ಎಲ್ಲಾ ಪ್ರಯತ್ನಗಳನ್ನು ಮಾಡಿದ್ರೂ ಕೆಲವೊಮ್ಮೆ ತೂಕ ಕಡಿಮೆಯಾಗುವುದೇ ಇಲ್ಲ. ಪ್ರಪಂಚದಾದ್ಯಂತ ಬೊಜ್ಜು ಬಹಳ ದೊಡ್ಡ ಸಮಸ್ಯೆಯಾಗಿದೆ. ನೀರು ಕುಡಿಯುವ ಮೂಲಕವೂ ಹೆಚ್ಚುತ್ತಿರುವ ತೂಕವನ್ನು ಕಡಿಮೆ ಮಾಡಬಹುದು. ನಮ್ಮ ದೇಹದ ಬಹುಪಾಲು ನೀರಿನಿಂದ ಮಾಡಲ್ಪಟ್ಟಿದೆ ಮತ್ತು ನೀರಿಲ್ಲದೇ ಬದುಕಲೂ ಸಾಧ್ಯವಿಲ್ಲ.
ಒಂದು ದಿನದಲ್ಲಿ ಕನಿಷ್ಠ 8 ಗ್ಲಾಸ್ ನೀರನ್ನು ಸೇವಿಸಬೇಕು. ಆದರೆ ಸರಿಯಾದ ಸಮಯಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುವ ಮೂಲಕ ತೂಕ ಇಳಿಸಬಹುದು.
ಬಿಸಿ ನೀರು: ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ ಬೆಳಗ್ಗೆ ಬಿಸಿ ಬಿಸಿ ನೀರನ್ನು ಕುಡಿಯಬೇಕು. ಇದು ದೇಹದಿಂದ ವಿಷವನ್ನು ಹೊರಹಾಕುತ್ತದೆ. ಇದರೊಂದಿಗೆ ತೂಕವು ಕ್ರಮೇಣ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಆದರೆ ವ್ಯಾಯಾಮದ ನಂತರ ಬಿಸಿ ನೀರು ಕುಡಿಯಬೇಡಿ. ತಣ್ಣನೆಯ ನೀರನ್ನೇ ಸೇವಿಸಿ.
ಹೊಟ್ಟೆ ಮತ್ತು ಸೊಂಟದ ಕೊಬ್ಬು ಕರಗುತ್ತದೆ: ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಎಣ್ಣೆಯುಕ್ತ ಮತ್ತು ಕೊಬ್ಬು ಆಧಾರಿತ ಆಹಾರಗಳಿಂದ ದೂರವಿರಬೇಕು. ಹಾಗೆಯೇ ನಿಯಮಿತವಾಗಿ ಬಿಸಿ ನೀರನ್ನು ಕುಡಿಯುತ್ತಿದ್ದರೆ ಇದು ಕ್ಯಾಲೊರಿ ಮತ್ತು ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆಹಾರ ತಿಂದು ಸುಮಾರು ಅರ್ಧ ಗಂಟೆಯ ನಂತರ ಉಗುರುಬೆಚ್ಚನೆಯ ನೀರನ್ನು ಕುಡಿಯಿರಿ.
ಹಸಿವನ್ನು ನಿಗ್ರಹಿಸುತ್ತದೆ: ಬಿಸಿನೀರಿನ ದೊಡ್ಡ ಪ್ರಯೋಜನವೆಂದರೆ ಅದನ್ನು ಕುಡಿಯುವುದರಿಂದ ಹಸಿವು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಹಸಿವಿನ ಕೊರತೆಯಿಂದಾಗ ಕಡಿಮೆ ಆಹಾರವನ್ನು ಸೇವಿಸಿದಾಗ ಕ್ರಮೇಣ ತೂಕವು ಸ್ವಯಂಚಾಲಿತವಾಗಿ ಕಡಿಮೆಯಾಗುತ್ತದೆ.
ಮಲಬದ್ಧತೆಯಿಂದ ಪರಿಹಾರ: ನಿತ್ಯವೂ ಬಿಸಿನೀರನ್ನು ಸೇವಿಸಿದರೆ ಹೊಟ್ಟೆಯ ಸಮಸ್ಯೆಗಳಾದ ಮಲಬದ್ಧತೆ, ಅಜೀರ್ಣ, ಗ್ಯಾಸ್ ಇತ್ಯಾದಿ ಸಮಸ್ಯೆಗಳು ದೂರವಾಗುತ್ತವೆ. ಸರಿಯಾದ ಜೀರ್ಣಕ್ರಿಯೆಯಿಂದಾಗಿ ತೂಕ ನಷ್ಟ ಪ್ರಾರಂಭವಾಗುತ್ತದೆ, ಆದ್ದರಿಂದ ಈ ರೀತಿಯಲ್ಲಿ ನೀರನ್ನು ಕುಡಿಯಿರಿ.