ನವದೆಹಲಿ: ಒಡಿಶಾದ ಬಾಲಸೋರ್ ನಲ್ಲಿ ಸಂಭವಿಸಿದ ಭೀಕರ ತ್ರಿವಳಿ ರೈಲು ಅಪಘಾತದ ನಡೆದ ಒಂದು ತಿಂಗಳ ನಂತರ ಭಾರತೀಯ ರೈಲ್ವೆ ಆಗ್ನೇಯ ರೈಲ್ವೆಯ ಜನರಲ್ ಮ್ಯಾನೇಜರ್ ಅರ್ಚನಾ ಜೋಶಿ ಅವರನ್ನು ಎತ್ತಗಂಡಿ ಮಾಡಿದೆ.
ಹಾಗೂ ಅರ್ಚನಾ ಜೋಶಿ ಅವರನ್ನು ಬೆಂಗಳೂರಿನ ಯಲಹಂಕದಲ್ಲಿರುವ ರೈಲ್ವೆ ಗಾಲಿ ಹಾಗೂ ಅಚ್ಚು ಕಾರ್ಖಾನೆಗೆ ವರ್ಗಾವಣೆ ಮಾಡಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿದೆ.
ಕರ್ತವ್ಯದಲ್ಲಿದ್ದ ಅಧಿಕಾರಿಗಳು ರೈಲು ಕಾರ್ಯಾಚರಣೆಗೆ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು ಅನುಸರಿಸಲು ವಿಫಲವಾದ ಕಾರಣ ರೈಲ್ವೇ ಸಿಬ್ಬಂದಿ/ಅಧಿಕಾರಿ ತಪ್ಪಿನಿಂದಾಗಿ ಅಪಘಾತ ಸಂಭವಿಸಿದೆ ಎಂದು ಸಿಆರ್ಎಸ್ ತನ್ನ ವರದಿಯಲ್ಲಿ ಸೂಚಿಸಿದೆ. ಅನಿಲ್ ಕುಮಾರ್ ಮಿಶ್ರಾ ಅವರು ದಕ್ಷಿಣ ಪೂರ್ವ ರೈಲ್ವೆಯ ಜನರಲ್ ಮ್ಯಾನೇಜರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅರ್ಚನಾ ಜುಲೈ 30, 2021 ರಂದು ಆಗ್ನೇಯ ರೈಲ್ವೆ ಜನರಲ್ ಮ್ಯಾನೇಜರ್ ಆಗಿ ಅಧಿಕಾರ ವಹಿಸಿಕೊಂಡಿದ್ದರು.