ಟೊಮೆಟೋ ಆಯ್ತು ಈಗ ಈರುಳ್ಳಿ ಸರದಿ; ಶೀಘ್ರದಲ್ಲೇ ಗಗನಕ್ಕೇರಬಹುದು ಬೆಲೆ….!

ದೇಶದಲ್ಲಿ ಟೊಮೆಟೋ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರ ಬೆನ್ನಲ್ಲೇ ಮತ್ತೊಂದು ಶಾಕ್‌ ಜನರಿಗೆ ಕಾದಿದೆ. ದೇಶದ ಬಹುತೇಕ ನಗರಗಳಲ್ಲಿ ಈರುಳ್ಳಿ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ಮುಂಗಾರು ಮಳೆಯಿಂದಾಗಿ ಈರುಳ್ಳಿ ಸರಬರಾಜಿಗೆ ತೊಂದರೆಯಾಗಿದ್ದು, ಈರುಳ್ಳಿ ಪೂರೈಕೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ವ್ಯಾಪಾರಿಗಳು. ಕಳೆದ ತಿಂಗಳಲ್ಲಿ ಮಹಾರಾಷ್ಟ್ರದ ಐದು ಪ್ರದೇಶಗಳಲ್ಲಿ ಈರುಳ್ಳಿ ಚಿಲ್ಲರೆ ಬೆಲೆಯಲ್ಲಿ ಗಮನಾರ್ಹ ಏರಿಕೆಯಾಗಿದೆ.

ಈ ಬೆಲೆ ಕಳೆದ ವರ್ಷಕ್ಕಿಂತ ಕಡಿಮೆಯಾದರೂ ಸರ್ಕಾರದ ಅಂಕಿಅಂಶಗಳ ಪ್ರಕಾರ, 2020 ರಲ್ಲಿ ಭಾರತದಲ್ಲಿ ಈರುಳ್ಳಿಯ ಸರಾಸರಿ ಚಿಲ್ಲರೆ ಬೆಲೆ 35.88 ರೂಪಾಯಿ ಇತ್ತು. 2021 ರಲ್ಲಿ ಸರಾಸರಿ ಚಿಲ್ಲರೆ ಬೆಲೆ 32.52 ರೂಪಾಯಿ ಮತ್ತು 2022 ರಲ್ಲಿ ಇದು ಕೆಜಿಗೆ 28.00 ರೂಪಾಯಿ ಆಗಿತ್ತು. 2023 ರಲ್ಲಿ ಈರುಳ್ಳಿ ಬೆಲೆ ಸ್ಥಿರವಾಗಿದೆ. ಆದಾಗ್ಯೂ ಮುಂಬರುವ ತಿಂಗಳುಗಳಲ್ಲಿ ಅದರ ಬೆಲೆ ಹೆಚ್ಚಾಗಬಹುದು.

ಎರಡು ತಿಂಗಳ ಹಿಂದೆ ರೈತರಿಂದ ಸುಮಾರು 0.14 ಮಿಲಿಯನ್ ಟನ್ ಈರುಳ್ಳಿ ದಾಸ್ತಾನನ್ನು ಸರ್ಕಾರ ಖರೀದಿಸಿದೆ. 2023-24ರ ಋತುವಿನಲ್ಲಿ ಕೇಂದ್ರ ಸರ್ಕಾರವು 3 ಲಕ್ಷ ಟನ್ ಈರುಳ್ಳಿಯನ್ನು ಬಫರ್ ಸ್ಟಾಕ್‌ನಲ್ಲಿ ಇರಿಸಲಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಏಪ್ರಿಲ್‌ನಲ್ಲಿ ಹೇಳಿದ್ದರು. 2022-23ರಲ್ಲಿ 2.51 ಲಕ್ಷ ಟನ್ ಈರುಳ್ಳಿಯನ್ನು ಬಫರ್ ಸ್ಟಾಕ್‌ನಲ್ಲಿ ಇರಿಸಲಾಗಿತ್ತು.

ಮತ್ತೊಂದೆಡೆ ಈರುಳ್ಳಿ ಉತ್ಪಾದನೆಯು 2021-22 ರಲ್ಲಿ 31.69 ಮಿಲಿಯನ್ ಟನ್‌ಗಳಷ್ಟಿತ್ತು, ಇದು 31.01 ಮಿಲಿಯನ್ ಟನ್‌ಗಳಿಗೆ ಕುಸಿಯುವ ಅಂದಾಜಿದೆ ಎಂದು ವರದಿಗಳು ಹೇಳಿವೆ. ಬೆಲೆಗಳನ್ನು ಸ್ಥಿರಗೊಳಿಸಲು ಈರುಳ್ಳಿಯನ್ನು ಬಫರ್ ಸ್ಟಾಕ್ನಲ್ಲಿ ಇರಿಸಲಾಗುತ್ತದೆ. ಪೂರೈಕೆ ಕಡಿಮೆಯಾದಾಗ ಮತ್ತು ಬೆಲೆಗಳು ಏರುತ್ತಿರುವಾಗ ಇದನ್ನು ಮಾಡಲಾಗುತ್ತದೆ. ರಾಬಿ ಈರುಳ್ಳಿಯನ್ನು ಏಪ್ರಿಲ್‌ನಲ್ಲಿ ಕೊಯ್ಲು ಮಾಡಲಾಗುತ್ತದೆ ಮತ್ತು ಅಕ್ಟೋಬರ್-ನವೆಂಬರ್‌ನಲ್ಲಿ ಖಾರಿಫ್ ಬೆಳೆ ಕೊಯ್ಲು ಮಾಡುವವರೆಗೆ ಗ್ರಾಹಕರ ಬೇಡಿಕೆಯನ್ನು ಪೂರೈಸಲಾಗುತ್ತದೆ.

ದೇಶಾದ್ಯಂತ ಟೊಮೆಟೋ ಬಹಳಷ್ಟು ದುಬಾರಿಯಾಗಿದೆ. ಕೆಜಿಗೆ 10 ರಿಂದ 20 ರೂಪಾಯಿ ಇದ್ದ ಟೊಮೆಟೋ ದರ ಈಗ 80 ರಿಂದ 100 ರೂಪಾಯಿಗೆ ಏರಿದೆ. ಹವಾಮಾನ ವೈಪರೀತ್ಯದಿಂದಾಗಿ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೇಟೊ ಹೊರತುಪಡಿಸಿ ಇತರೆ ತರಕಾರಿಗಳ ಬೆಲೆಯೂ ಹೆಚ್ಚಾಗಿದ್ದು, ಜನಸಾಮಾನ್ಯರು ಪರದಾಡುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read