HomeKarnatakaBIG NEWS: ಹೃದಯಾಘಾತದಿಂದ ಮೃತಪಟ್ಟ ಸನ್ಯಾಸಿ ಮನೆಯಲ್ಲಿ 30 ಲಕ್ಷಕ್ಕೂ ಅಧಿಕ ಹಣ ಪತ್ತೆ

BIG NEWS: ಹೃದಯಾಘಾತದಿಂದ ಮೃತಪಟ್ಟ ಸನ್ಯಾಸಿ ಮನೆಯಲ್ಲಿ 30 ಲಕ್ಷಕ್ಕೂ ಅಧಿಕ ಹಣ ಪತ್ತೆ

ಚಿತ್ರದುರ್ಗ: ಹೃದಯಾಘಾತದಿಂದ ಮೃತಪಟ್ಟಿದ್ದ ಸನ್ಯಾಸಿಯ ಮನೆಯಲ್ಲಿ ಲಕ್ಷಾಂತರ ರೂಪಾಯಿ ಹಣ ಪತ್ತೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿರುವ ಗಂಗಾಧರ ಶಾಸ್ತ್ರಿ (70) ವಾರದ ಹಿಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇದೀಗ ಅವರ ಮನೆಯ ವಿವಿಧೆಡೆ ಇರಿಸಿದ್ದ 30 ಲಕ್ಷಕ್ಕೂ ಅಧಿಕ ಹಣ ಪತ್ತೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗಂಗಾಧರ ಶಾಸ್ತ್ರಿ, ಶಾಸ್ತ್ರ ಹೇಳುವುದು, ಶುಭಕಾರ್ಯ ಪೂಜೆ ಮಡಿಸುವುದು ಮಾಡುತ್ತಿದ್ದರು. 16 ಎಕರೆ ಜಮೀನು, 4 ಎಕರೆ ತೆಂಗಿನ ತೋಟ, ಗದ್ದೆ ಹೊಂದಿದ್ದರು. ಭಕ್ತರಿಂದ ಬಂದ ಕಾಣಿಕೆ ಹಣವೇ 46 ಸಾವಿರ ರೂಪಾಯಿ ಹಾಗೂ ಕೃಷಿ ಇನ್ನಿತರ ಆದಾಯದಿಂದ ಬಂದ 30 ಲಕ್ಷ ರೂ. ಅಧಿಕ ಹಣ ಪತ್ತೆಯಾಗಿದೆ. ಇದೀಗ ಶಾಸ್ತ್ರಿಗಳ ಮನೆ ಪರಿಶೀಲಿಸಿದಾಗ 30 ಲಕ್ಷಕ್ಕೂ ಅಧಿಕ ಹಣ ಪತ್ತೆಯಾಗಿದೆ.

ಶಾಸ್ತ್ರಿಗಳ ಜಮೀನಿನಲ್ಲಿಯೇ ಭಕ್ತರು ಗದ್ದುಗೆ ನಿರ್ಮಾಣಕ್ಕೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ಭಕ್ತರ ಸಭೆ ಕರೆದು ಸಮಿತಿ ರಚಿಸಲು ನಿರ್ಧರಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular