HomeKarnataka‘ಗೃಹಲಕ್ಷ್ಮಿ’ ಜಾರಿಗೆ ಮುನ್ನವೇ ಗೃಹಿಣಿಯರ ಖಾತೆಗೆ ಅನ್ನಭಾಗ್ಯ ಹಣ ಜಮಾ: ಆಧಾರ್ ಜೋಡಣೆ ಕಡ್ಡಾಯ

‘ಗೃಹಲಕ್ಷ್ಮಿ’ ಜಾರಿಗೆ ಮುನ್ನವೇ ಗೃಹಿಣಿಯರ ಖಾತೆಗೆ ಅನ್ನಭಾಗ್ಯ ಹಣ ಜಮಾ: ಆಧಾರ್ ಜೋಡಣೆ ಕಡ್ಡಾಯ

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ಬದಲಿಗೆ ಹಣ ನೀಡಲು ಸರ್ಕಾರ ನಿರ್ಧರಿಸಿದ್ದು, ಈ ಹಣವನ್ನು ಬಿಪಿಎಲ್ ಕಾರ್ಡ್ ಹೊಂದಿದ ಯಜಮಾನ/ನಿ ಖಾತೆಗೆ ಜಮಾ ಮಾಡಲಾಗುತ್ತದೆ.

ಅನ್ನಭಾಗ್ಯ ಯೋಜನೆಯ 5 ಕೆಜಿ ಅಕ್ಕಿ ಹಣ ಬ್ಯಾಂಕ್ ಖಾತೆಗೆ ಜಮಾ ಆಗಲು ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಜೋಡಣೆಯಾಗಿರಬೇಕು. ಬಿಪಿಎಲ್ ಪಡಿತರ ಚೀಟಿ ಹೊಂದಿದ್ದು, ಈ ಚೀಟಿಯಲ್ಲಿ ಮನೆಯ ಮುಖ್ಯಸ್ಥರು ಯಾರು ಎಂದು ನಮೂದಾಗಿರುತ್ತದೆಯೋ ಅವರ ಹೆಸರಲ್ಲಿ ಬ್ಯಾಂಕ್ ಖಾತೆ ಹೊಂದಿರಬೇಕು. ಆ ಖಾತೆಗೆ ಆಧಾರ್ ಲಿಂಕ್ ಆಗಿರಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾಮಾನ್ಯವಾಗಿ ಬಿಪಿಎಲ್ ಕಾರ್ಡ್ ದಾರರಲ್ಲಿ ಶೇಕಡ 92 ರಷ್ಟು ಮಹಿಳೆಯರೇ ಯಜಮಾನಿ ಆಗಿರುವುದರಿಂದ ಗೃಹಲಕ್ಷ್ಮಿ ಯೋಜನೆ ಜಾರಿಗೆ ಮೊದಲೇ ಅವರ ಖಾತೆಗಳಿಗೆ ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗಲಿದೆ. ಮನೆಯ ಮುಖ್ಯಸ್ಥರ ಹೆಸರಲ್ಲಿ ಖಾತೆ ಇಲ್ಲದಿದ್ದರೆ ಕುಟುಂಬದ ಬೇರೆ ಸದಸ್ಯರ ಖಾತೆಯ ವಿವರ ನೀಡಬಹುದಾಗಿದೆ. 1.28 ಕೋಟಿ ಫಲಾನುಭವಿಗಳಲ್ಲಿ 6 ಲಕ್ಷ ಖಾತೆದಾರರ ಖಾತೆ ಆಧಾರ್ ಲಿಂಕ್ ಆಗಿಲ್ಲವೆಂದು ಹೇಳಲಾಗಿದೆ. ಆಧಾರ್ ಜೋಡಣೆ ಮಾಡಿಸಿದ ಬಳಿಕ ಅಂತಹವರ ಖಾತೆಗಳಿಗೂ ಅನ್ನ ಭಾಗ್ಯ ಯೋಜನೆಯ ಹಣ ಜಮಾ ಆಗಲಿದೆ. ಮನೆಯ ಯಜಮಾನಿ ಖಾತೆಗೆ 2 ಸಾವಿರ ರೂ. ಜಮಾ ಮಾಡುವ ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್ ನಲ್ಲಿ ಚಾಲನೆ ನೀಡಲಿದ್ದು, ಅಷ್ಟರೊಳಗೆ ಜುಲೈನಿಂದಲೇ 5 ಕೆಜಿ ಅಕ್ಕಿ ಹಣ ನೀಡಲಾಗುವುದು ಎನ್ನಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular