HomeKarnatakaವಿದ್ಯಾರ್ಥಿಗಳ ಗಮನಕ್ಕೆ : ‘DUPLICATE TC ’ ಪಡೆಯುವ ಬಗ್ಗೆ ಇಲ್ಲಿದೆ ಮುಖ್ಯ ಮಾಹಿತಿ

ವಿದ್ಯಾರ್ಥಿಗಳ ಗಮನಕ್ಕೆ : ‘DUPLICATE TC ’ ಪಡೆಯುವ ಬಗ್ಗೆ ಇಲ್ಲಿದೆ ಮುಖ್ಯ ಮಾಹಿತಿ

ಬೆಂಗಳೂರು : ಶಾಲಾ ವರ್ಗಾವಣೆ ಪ್ರಮಾಣಪತ್ರವನ್ನು (TC) ವಿದ್ಯಾರ್ಥಿಗೆ ಮತ್ತೊಂದು ಸಂಸ್ಥೆಯಲ್ಲಿ ಪ್ರವೇಶ ಪಡೆಯಲು ವ್ಯಾಸಂಗ ಮಾಡಿದ ಸಂಸ್ಥೆಯಿಂದ ನೀಡಲಾಗುತ್ತದೆ. ಹಾಗಾದರೆ ಒಂದು ವೇಳೆ ಒರಿಜಿನಲ್ ಟಿಸಿ ಕಳೆದುಕೊಂಡರೆ ಏನು ಮಾಡಬೇಕು. ಇಲ್ಲಿದೆ ನೋಡಿ ಮಾಹಿತಿ .

ವಿದ್ಯಾರ್ಥಿಯ ಜೀವನದಲ್ಲಿ TC ಯ ತನ್ನದೇ ಆದ ಮಹತ್ವವನ್ನು ಹೊಂದಿದೆ. ವಿದ್ಯಾರ್ಥಿಯು ತನ್ನ ಟಿಸಿ ಪಡೆದಿದ್ದರೂ ಕಳೆದುಹೋದರೆ, ಅವನು/ಅವಳು ನಕಲು ಪಡೆಯಬಹುದು.

2 ನೇ ವರ್ಗಾವಣಿ ಪ್ರಮಾಣ ಪತ್ರವನ್ನು ಪಡೆಯಲು ಈ ಕೆಳಕಾಣಿಸಿದ ದಾಖಲೆಗಳನ್ನು ಅರ್ಜಿಯ ಜೊತೆ ಶಾಲೆಗೆ ಕಡ್ಡಾಯವಾಗಿ ಲಗತ್ತಿಸಿ ಕೊಡಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1) ಟಿ.ಸಿ. ಬೇಡಿಕೆಯ ಅರ್ಜಿಯ ಪ್ರತಿ
2) ಟಿ ಸಿ. ಕಳೆದು ಹೋಗಿರುವ ಬಗ್ಗೆ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು . ದಾಖಲಿಸಿದ ಸ್ವೀಕೃತಿ ಪ್ರತಿ .
3) ಎರಡನೇ ಟಿ.ಸಿ. ಪಡೆಯುವ ಉದ್ದೇಶ ಹಾಗೂ ಮೊದಲನೆಯ ಟಿ .ಸಿ, ಕಳೆದು ಹೋಗಿರುವ ಬಗ್ಗೆ ನೋಟರಿಯಿಂದ ಅಫಿಡವಿಟ್ ಪ್ರತಿ .

4) ಡುಪ್ಲಿಕೇಟ್ 9.ಸಿ. ಪಡೆಯಲು ನಿಗದಿತ ಶುಲ್ಕ ಪಾವತಿಸಿದ ರಸೀದಿ ತರಬೇಕು .
5) ಚಲನ್ ತುಂಬುವ ಸರ್ಕಾರಿ ಖಾತೆ ಸಂಖ್ಯೆ: 0202-01-102-1-01

6) ಚಲನ್ ತುಂಬಬೇಕಾದ ಹಣ 25-00 ರೂಪಾಯಿಗಳು
7) ಶಾಲೆಯ ಡೈಸ್ ಕೋಡ್ ಸಂಖ್ಯೆ

ವಿಶೇಷ ಸೂಚನೆ
• ಟಿಸಿ ಪ್ರತಿಯ ಝರಾಕ್ಸ್ ಪ್ರತಿ ಅಥವಾ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿರುವುದಕ್ಕೆ ಯಾವುದಾದರು ದಾಖಲೆಗಳು ಇದ್ದರೆ ತರುವುದು ಸೂಕ್ತ .

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular