HomeKarnatakaBIG NEWS: 23 ವರ್ಷಗಳಿಂದ ವಿದ್ಯುತ್ ಬಿಲ್ ಪಾವತಿಸದ ಮೈಶುಗರ್ ಕಾರ್ಖಾನೆ; ಬರೋಬ್ಬರಿ 40 ಕೋಟಿ...

BIG NEWS: 23 ವರ್ಷಗಳಿಂದ ವಿದ್ಯುತ್ ಬಿಲ್ ಪಾವತಿಸದ ಮೈಶುಗರ್ ಕಾರ್ಖಾನೆ; ಬರೋಬ್ಬರಿ 40 ಕೋಟಿ ರೂ ಕರೆಂಟ್ ಬಿಲ್ ಬಾಕಿ

ಮಂಡ್ಯ: ರಾಜ್ಯದ ಏಕೈಕ ಸರ್ಕಾರಿ ಸಕ್ಕರೆ ಕಾರ್ಖಾನೆ ಮಂಡ್ಯ ಮೈಶುಗರ್ ಫ್ಯಾಕ್ಟರಿ ಬರೋಬ್ಬರಿ 40 ಕೋಟಿ ರೂಪಾಯಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ.

ಕಳೆದ 23 ವರ್ಷಗಳಿಂದ ಮೈಶುಗರ್ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ವಿದ್ಯುತ್ ಬಿಲ್ ನ್ನೇ ಪಾವತಿಸಿಲ್ಲ ಎಂದು ತಿಳಿದುಬಂದಿದೆ. ಹಲವು ವರ್ಷಗಳಿಂದ ನಷ್ಟಕ್ಕೆ ಸಿಲುಕಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇತ್ತೀಚೆಗಷ್ಟೇ ಕಾರ್ಖಾನೆ ಪುನರಾರಂಭಕ್ಕಾಗಿ 50 ಕೋಟಿ ರೂಪಾಯಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. ಪ್ರಸ್ತುತ ಸಾಲಿನಲ್ಲಿ 5 ಲಕ್ಷ ಟನ್ ಕಬ್ಬು ನುರಿಯುವ ಗುರಿ ಹೊಂದಿದೆ. ಕಬ್ಬು ಅರೆಯಲು ಈ ಬಾರಿ ರೈತರೊಂದಿಗೆ ಕಾರ್ಖಾನೆ ಒಪ್ಪಂದ ಮಾಡಿಕೊಂಡಿದೆ. ಹಾಗಾಗಿ ವಿದ್ಯುತ್ ಪೂರೈಸುವಂತೆ ಎಂ ಎಲ್ ಸಿ ದಿನೇಶ್ ಗೂಳಿಗೌಡ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಮನವಿ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular