ಬೆಂಗಳೂರು : ಮನೆ ಒಡತಿಯರಿಗೆ 2 ಸಾವಿರ ನೀಡುವ ರಾಜ್ಯ ಸರ್ಕಾರದ ‘ಗೃಹಲಕ್ಷ್ಮಿ’ ಯೋಜನೆಯ ಪ್ರತ್ಯೇಕ ಆಪ್ ಗೆ ಸಿಎಂ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದಾರೆ. ಆಗಸ್ಟ್ ತಿಂಗಳಿನಲ್ಲಿ ಮಹಿಳೆಯರ ಖಾತೆಗೆ 2 ಸಾವಿರ ಹಣ ಹಾಕುತ್ತೇವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಸಂಪುಟ ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ‘ಗೃಹಲಕ್ಷ್ಮಿ’ ಯೋಜನೆ ಜಾರಿ ಸಂಬಂಧ ಇಂದು ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ. ಜುಲೈ 14 ರಿಂದ ‘ಗೃಹಲಕ್ಷ್ಮಿ’ ಯೋಜನೆ ಜಾರಿಯಾಗುವ ಸಾಧ್ಯತೆ ಇದೆ. ಖಂಡಿತವಾಗಿ ಆಗಸ್ಟ್ ತಿಂಗಳಿನಲ್ಲಿ ಮಹಿಳೆಯರ ಖಾತೆಗೆ 2 ಸಾವಿರ ಹಣ ಹಾಕುತ್ತೇವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಗೃಹಜ್ಯೋತಿಯಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ತಡವಾಗುತ್ತಿದೆ. ಎಷ್ಟೇ ಅಪ್ಲಿಕೇಶನ್ ಮಾಡಿದರೂ ಸರ್ವರ್ ಒಂದೇ ಅಲ್ವಾ ಹಾಗಾಗಿ ಸರ್ವರ್ ಸಮಸ್ಯೆ ಆಗುತ್ತಿದೆ ಎಂದರು. ಈ ಬಗ್ಗೆ ಜುಲೈ 3 ರಂದು ಸಂಪೂರ್ಣ ಮಾಹಿತಿ ನೀಡುತ್ತೇವೆ ಎಂದರು.
‘ಗೃಹಲಕ್ಷ್ಮಿ’ ಯೋಜನೆ ಹೆಸರಿನಲ್ಲಿ ಬಂದಿದೆ ಮೂರು ನಕಲಿ ಆ್ಯಪ್
ಮನೆ ಒಡತಿಯರಿಗೆ 2 ಸಾವಿರ ನೀಡುವ ರಾಜ್ಯ ಸರ್ಕಾರದ ‘ಗೃಹಲಕ್ಷ್ಮಿ’ ಯೋಜನೆಯ ಪ್ರತ್ಯೇಕ ಆಪ್ಗೆ ಕ್ಯಾಬಿನೆಟ್ ನಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಿದೆ. ರಾಜ್ಯ ಸರ್ಕಾರದ ಅಧಿಕೃತ ‘ಗೃಹಲಕ್ಷ್ಮೀ ಆ್ಯಪ್’ ಬಿಡುಗಡೆಗೂ ಮುನ್ನ ನಕಲಿ ಆ್ಯಪ್ ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹೌದು, ಪ್ಲೇಸ್ಟೋರ್ನಲ್ಲಿ ಗೃಹಲಕ್ಷ್ಮೀ ಹೆಸರಿನಲ್ಲಿ ಮೂರು ನಕಲಿ ಆ್ಯಪ್ಗಳನ್ನು ಕಿಡಿಗೇಡಿಗಳು ಸೃಷ್ಟಿಸಿ ಜನರನ್ನು ಯಾಮಾರಿಸುವ ಕೆಲಸ ಮಾಡುತ್ತಿದೆ ಗೃಹಲಕ್ಷ್ಮಿ ಸ್ಕೀಮ್ ಎನ್ನುವ ಹೆಸರಿನಲ್ಲಿ ಒಂದು ಆ್ಯಪ್ , ಗೃಹ ಲಕ್ಷ್ಮಿ ಯೋಜನಾ ಆ್ಯಪ್ , ಗೃಹಲಕ್ಷ್ಮೀ ಯೋಜನೆ ಅಪ್ಲಿಕೇಶನ್ ಎನ್ನುವ ಹೆಸರಿಲ್ಲಿ ಒಟ್ಟು ಮೂರು ನಕಲಿ ಆ್ಯಪ್ ಪ್ಲೇ ಸ್ಟೋರಿನಲ್ಲಿ ಪತ್ತೆಯಾಗಿವೆ. ಇವು ನಕಲಿ ಆ್ಯಪ್ ಗಳಾಗಿದೆ. ನೀವೇನಾದರೂ ಈ ನಕಲಿ ಆ್ಯಪ್ ಬಳಸಿದ್ರೆ ನಿಮ್ಮ ಬ್ಯಾಂಕ್ ಖಾತೆಗಳಿಗೂ ಕನ್ನ ಹಾಕುವ ಸಾಧ್ಯತೆಯಿದೆ. ಆದ್ದರಿಂದ ನೀವು ಎಚ್ಚರದಿಂದಿರುವುದು ಒಳಿತು.